ಬೆಂಗಳೂರು: ಮೆಡಿಕಲ್ ಬೀಗ ಮುರಿದು ಕಳ್ಳನ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರದ 4M ಮೆಡಿಕಲ್‌ನಲ್ಲಿ ನಡೆದಿದೆ.
ಕಳೆದ ಭಾನುವಾರ ರಾತ್ರಿ ಕೈಚಳಕ ತೋರಿರುವ ಕಳ್ಳ, ರಸ್ತೆಯಲ್ಲಿ ವಾಹನಳು ಓಡಾಟ ಇರುವಾಗಲೇ ಕಳ್ಳತನ ಮಾಡಿದ್ದಾನೆ. ಇಡೀ ಮೆಡಿಕಲ್ ಜಾಲಾಡಿ ಐದು ಸಾವಿರ ನಗದು, ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದ ಖತರ್ನಾಕ್ ಕಳ್ಳನ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸದ್ಯ ಈ ಘಟನಾ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರು | ಸ್ನೇಹಿತೆಯ ರೂಂಗೆ ಕರೆದೊಯ್ದು ಆಂದ್ರ ಮೂಲದ ಯುವತಿಯನ್ನು ಹತ್ಯೆಗೈದ ಯುವಕ



















