ಬೆಂಗಳೂರು : ಬೆಂಗಳೂರಿನ ಹೊಟೇಲ್ ಉದ್ಯಮಕ್ಕೆ ರಸ್ತೆ ಕಾಮಗಾರಿ ಕಂಟಕವಾಗಿದ್ದು, ಎಲ್ಲೆಂದರಲ್ಲಿ ರಸ್ತೆ ಅಗೆಯುವುದರಿಂದ ವ್ಯಾಪಾರದಲ್ಲಿ ಭಾರೀ ಕುಸಿತ ಉಂಟಾಗಿದೆ ಎಂದು ಬೆಂಗಳೂರು ಹೊಟೇಲ್ ಸಂಘದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆಯಲಾಗಿದೆ.
ಮೂರು ತಿಂಗಳೊಳಗೆ ಮುಗಿಯಬೇಕಾದ ರಸ್ತೆ ಕಾಮಾಗಾರಿ ಒಂದು ವರ್ಷವಾದರೂ ಪೂರ್ಣಗೊಳ್ಳುತ್ತಿಲ್ಲ. ಇದರಿಂದಾಗಿ ಹೊಟೇಲ್, ರೆಸ್ಟೋರೆಂಟ್, ಬೇಕರಿ ಸೇರಿದಂತೆ ಆಹಾರ ಉದ್ಯಮಕ್ಕೆ ಭಾರೀ ಹೊಡೆತ ನೀಡಿದೆ.
ಶೇ. 50ರಷ್ಟು ವ್ಯಾಪಾರ ಕುಸಿತವಾಗಿದ್ದು, ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ನಿಗದಿತ ಸಮಯದೊಳಗೆ ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಒತ್ತಾಯಿಸಿ ಪತ್ರ ಬರೆಯಲಾಗಿದೆ.