ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ರೋಡ್ ರೇಜ್ ಪ್ರಕರಣ ದಿನನಿತ್ಯವೂ ಹೆಚ್ಚಳವಾಗುತ್ತಿದೆ.
ನಡುರಸ್ತೆಯಲ್ಲೆ ಡ್ರ್ಯಾಗರ್ ಹಿಡಿದು ಪುಂಡಾಟ ಮಾಡಿರುವ ಘಟನೆ ಮತ್ತೆ ಬೆಳಕಿಗೆ ಬಂದಿದೆ. ಬೈಕ್ ಸವಾರನೊಬ್ಬ ಗೂಡ್ಸ್ ವಾಹನ ಚಾಲಕನ ಮೇಲೆ ಡ್ರಾಗರ್ ಬೀಸಿ ದಾಂದಲೇ ಮಾಡಿದ್ದಾನೆ.
ಗೂಡ್ಸ್ ವಾಹನದ ಗ್ಲಾಸ್ ಒಡೆದು ಪುಂಡಾಟ ಮಾಡಿರುವ ಘಟನೆ ಲಿಂಗರಾಜಪುರ ಫ್ಲೈಓವರ್ ಕೆಳಗೆ ನಡೆದಿದೆ.
ಸಂಚಾರ ಮಾಡುವ ವೇಳೆ ಸೈಡ್ ಬಿಟ್ಟಿಲ್ಲ ಎಂದು ಬೈಕ್ ಸವಾರ ಕಿರಿಕ್ ಮಾಡಿದ್ದು, ಬೈಕ್ ಹಾಗೂ ಗೂಡ್ಸ್ ಆಟೋ ಚಾಲಕರ ಮಧ್ಯೆ ಗಲಾಟೆ ಆಗಿದೆ. ಗಲಾಟೆ ತಡೆಯಲು ಹೋದವರ ನಡುವೆಯೂ ಬೈಕ್ ಸವಾರ ಕಿರಿಕ್ ಮಾಡಿದ್ದಾನೆ.
ಸಾರ್ವಜನಿಕ ಸ್ಥಳದಲ್ಲಿ ಕೈಯಲ್ಲಿ ಡ್ರ್ಯಾಗರ್ ಹಿಡಿದು. AP03 CA 3739 ನೊಂದಣಿಯ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಇಬ್ಬರು ಯುವಕರು ಪುಂಡಾಟ ಮಾಡಿದ್ದಾರೆ.