ಹಾವೇರಿ | ಜಿಲ್ಲೆಯ ಹಿರೇಕೆರೂರು ತಾಲೂಕಿನ ಚನ್ನಹಳ್ಳಿ ತಾಂಡದ ಬಳಿ ಲವ್ ಮ್ಯಾರೇಜ್ ಮಾಡಿಸವ ಧಾವಂತದ ವೇಳೆ ಸ್ವಿಫ್ಟ್ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.
ಬೆಂಗಳೂರಿನಿಂದ ಚನ್ನಹಳ್ಳಿ ಪ್ಲ್ಯಾಟ್‌ಗೆ ಬಂದಿದ್ದ ಮೂವರು ಯುವಕರು ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುವಾಗ ಈ ಅವಘಡ ಸಂಭವಿಸಿದೆ. ಅತಿವೇಗದಿಂದ ಚಲಾಯಿಸಿದ್ದ ಪರಿಣಾಮ ಚಾಲಕ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.
ಅಪಘಾತದಲ್ಲಿ ಇರ್ಪಾನ್, ಚಂದ್ರು ಮತ್ತು ಗುರುರಾಜ್ ಎಂಬ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ಮೂಲತಃ ಗುಲ್ಬರ್ಗ ಜಿಲ್ಲೆಯ ಜೀವರ್ಗಿ ಭಾಗದವರು ಎಂದು ತಿಳಿದುಬಂದಿದೆ. ಚನ್ನಹಳ್ಳಿ ಪ್ಲ್ಯಾಟ್‌ನ ಯುವತಿಯನ್ನು ಇರ್ಪಾನ್ ಜೊತೆ ಮದುವೆ ಮಾಡಲು ಯೋಜನೆ ರೂಪಿಸಿಕೊಂಡು ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಕಾರು ಅಪಘಾತಕ್ಕೀಡಾದ ಬಳಿಕ ಯುವತಿ ಸ್ಥಳದಿಂದ ತೆರಳಿದ್ದಾಳೆ ಎಂದು ತಿಳಿದುಬಂದಿದೆ. ಗಾಯಾಳು ಮೂವರಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಸಂಬಂಧ ಹೀರೆಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ : ದೇಶದ ಸೇನೆಯಲ್ಲಿ ಅಗ್ನಿವೀರರ ನೇಮಕಾತಿಗೆ ಅರ್ಜಿ ಆಹ್ವಾನ | ಹೀಗೆ ಅರ್ಜಿ ಸಲ್ಲಿಸಿ



















