ಬೆಂಗಳೂರು: ಶಾಲಾ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆ ಬಳಕೆಗೆ ಬ್ರೇಕ್ ಹಾಕಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮಧ್ಯಾಹ್ನದ ಬಿಸಿಯೂಟಕ್ಕೆ ಅಡುಗೆ ಬಳಸುವ ಅಡುಗೆಯ ಎಣ್ಣೆ ಬಳಕೆಯ ಮಿತಿಯನ್ನು ಶಿಕ್ಷಣ ಇಲಾಖೆ ಕಡಿಮೆ ಮಾಡುವಂತೆ ಆದೇಶ ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳಲ್ಲಿ ಅತಿಯಾದ ಬೊಜ್ಜು ಕಂಡು ಬರುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಶಾಲಾ ಮಕ್ಕಳಲ್ಲಿ ಶೇ. 30ಕ್ಕಿಂತ ಹೆಚ್ಚು ಮಕ್ಕಳಲ್ಲಿ ಬೊಜ್ಜು ಕಂಡು ಬರುತ್ತಿದೆ. ಅತಿಯಾದ ಬೊಜ್ಜಿನಿಂದಾಗಿ ಶಾಲಾ ಮಕ್ಕಳಲ್ಲಿ ಹೃದಯಘಾತ ಸೇರಿದಂತೆ ನಾನಾ ಸಮಸ್ಯೆಗಳು ಕಂಡು ಬರುತ್ತಿವೆ. ಹೀಗಾಗಿ ಶಾಲಾ ಶಿಕ್ಷಣ ಇಲಾಖೆಯು ಮಕ್ಕಳ ಬಿಸಿಯೂಟಕ್ಕೆ ಬಳಕೆಯಾಗುವ ಅಡುಗೆ ಎಣ್ಣೆಯನ್ನು ಶೇ. 10ರಷ್ಟು ಕಡಿತಗೊಳಿಸಿ ಆದೇಶ ಹೊರಡಿಸಿದೆ.