ಬೆಂಗಳೂರು: ನಟ ರಿಷಬ್ ಶೆಟ್ಟಿ (Rishab Shetty) ತಮ್ಮ ಪತ್ನಿಯ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಲವ್ಲಿಯಾಗಿ ವಿಶ್ ಮಾಡಿದ್ದಾರೆ.
ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ ಎಂದು ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ. ರಿಷಬ್ ಶೆಟ್ಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ, ನಗುವಿನ ಪುಟ್ಟ ಕ್ಷಣಗಳಿಂದ ಹಿಡಿದು, ನಾವು ಒಟ್ಟಿಗೆ ಕಾಣುವ ದೊಡ್ಡ ಕನಸುಗಳವರೆಗೆ, ನಿನ್ನ ಜೊತೆಗಿನ ಪ್ರತಿಯೊಂದು ಕ್ಷಣವೂ ಒಂದು ಅಮೂಲ್ಯ ಉಡುಗೊರೆ. ನಿನ್ನ ನಗುವಿನ ಬೆಳಕಲ್ಲಿ, ನನ್ನ ಬದುಕು ಬೆಳಗಿದೆ. ಈ ದಿನ, ನಿನ್ನ ಎಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಕೂಡ ರಿಷಬ್ ಪತ್ನಿಗೆ ಶುಭ ಕೋರುತ್ತಿದ್ದಾರೆ.
ರಿಷಬ್ ಶೆಟ್ಟಿ, ‘ಕಾಂತಾರ ಚಾಪ್ಟರ್ 1’ರ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದು, ಕುಂದಾಪುರದಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ.