ಐಪಿಎಲ್ ಮೆಗಾ ಹರಾಜು ಆರಂಭವಾಗಿದ್ದು, ನಿರೀಕ್ಷೆಯಂತೆ ಭಾರತ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ರಿಷಬ್ ಪಂತ್ ಉತ್ತಮ ಮೊತ್ತಕ್ಕೆ ಹರಾಜಾಗಿದ್ದಾರೆ.
ಬರೋಬ್ಬರಿ 27 ಕೋಟಿ ರೂ. ನೀಡಿ ಲಕ್ನೋ ಸೂಪರ್ ಜೈಂಟ್ಸ್ ತಂಡ ರಿಷಬ್ ಪಂತ್ ರನ್ನು ಖರೀದಿಸಿದೆ. ಕೆಎಲ್ ರಾಹುಲ್ ಅವರನ್ನು ಅವಮಾನಿಸಿ, ತಂಡದಿಂದ ಕೈ ಬಿಟ್ಟಿದ್ದ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ, ಈಗ ಪಂತ್ ರನ್ನು ಖರೀದಿಸಿದೆ. ರಿಷಬ್ ಪಂತ್, ಕೆಲವೇ ಕ್ಷಣಗಳಲ್ಲಿ ಐಪಿಎಲ್ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದ ಶ್ರೇಯಸ್ ಅಯ್ಯರ್ ಅವರ ದಾಖಲೆ ಮುರಿದರು.
ರಿಷಬ್ ಪಂತ್ ಕಳೆದ 9 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಜೊತೆ ಕಾಣಿಸಿಕೊಂಡಿದ್ದರು. 2021 ರಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಹರಾಜಿಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಿಷಬ್ ಪಂತ್ ನಡುವೆ ನಾಯಕತ್ವದ ವಿಚಾರವಾಗಿ ವೈಮನಸು ಮೂಡಿದೆ ಎಂಬ ವದಂತಿ ಹಬ್ಬಿತ್ತು. ಹೀಗಾಗಿ ಪಂತ್ರನ್ನು ಡೆಲ್ಲಿ ತಂಡದಿಂದ ಬಿಡುಗಡೆ ಮಾಡಿದೆ ಎಂದು ಹೇಳಲಾಗಿತ್ತು. ಆದರೂ ಆರ್ ಟಿಎಮ್ ಕಾರ್ಡ್ ಬಳಸಿ, ಪಂತ್ ರನ್ನು ಮತ್ತೆ ತಂಡದಲ್ಲಿ ಉಳಿಸಿಕೊಳ್ಳಲು ಡೆಲ್ಲಿ ಪ್ರಯತ್ನಿಸಿತು. ಆದರೂ ಪಂತ್ ಮಾತ್ರ ಲಕ್ನೋ ಪಾಲಾದರು.