ಬೆಂಗಳೂರು: ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಕಾಂತಾರ ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ಹೀಗಾಗಿ ಅವರು ಈಗ ಕೈ ತುಂಬಾ ಸಂಭಾವನೆ ಗಳಿಸುತ್ತಿದ್ದಾರೆ. ಸಾಕಷ್ಟು ಅವಕಾಶಗಳು ಬರುತ್ತಿವೆ. ಈಗ ದುಬಾರಿಯ ಬೆಲೆಯ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.
ರಿಷಬ್ ಶೆಟ್ಟಿ ಸಂಭಾವನೆಗೆ ತಕ್ಕಂತೆಯೇ ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ದುಬಾರಿ ಬೆಲೆಯ ಕಾರು ಖರೀದಿಸಿದ್ದಾರೆ. ಟೊಯೊಟಾ ವೆಲ್ ಫೈರ್ ಕಾರು ರಿಷಬ್ ಶೆಟ್ಟಿ ಅವರ ಮನೆಗೆ ಬಂದಿದೆ. ವೆಲ್ ಫೈರ್ ಕಾರಿನ ಬೆಲೆ ಬರೋಬ್ಬರಿ 1.3 ಕೋಟಿ ರೂಪಾಯಿ. ಈಗ ಕಾರಿನ ಮುಂದೆ ನಿಂತು ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳು ಪೋಸ್ ನೀಡಿದ್ದಾರೆ.