ಬೆಂಗಳೂರು: ನಗರದಲ್ಲಿ ಪುಂಡರ ಅಟ್ಟಹಾಸ ಮುಂದುವರೆದಿದ್ದು, ಎಣ್ಣೆ ಏಟಿನಲ್ಲಿ ಪುಂಡರ ಗ್ಯಾಂಗ್ ವೊಂದು ಪೊಲೀಸರಿಗೆ ಧಮ್ಕಿ ಹಾಕಿದೆ. ಗುರುವಾರ ರಾತ್ರಿ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಟಲ್ ಮಾರ್ಕ್ ಬಾರ್ ಬಳಿ ಈ ಘಟನೆ ನಡೆದಿದೆ.
ಬಾರ್ ಮುಂದೆ ಸ್ಕಾರ್ಪಿಯೋ ನಿಲ್ಲಿಸಿದ್ದ ಕಿಡಿಗೇಡಿಗಳು ಕಾರಿನಲ್ಲಿ ಕುಳಿತು ಎಣ್ಣೆ ಹೊಡೆಯುತ್ತಿದ್ದರು. ಆ ವೇಳೆ ನೈಟ್ ರೌಂಡ್ಸ್ ಮಾಡುತ್ತಿದ್ದ ಪಿಎಸ್ ಐ ಮುರುಳಿ ನೋಡಿದ್ದಾರೆ. ಆಗ ಕಾರು ನಿಲ್ಲಿಸಲು ಹೇಳಿದ್ದಾರೆ. ಕಾರು ನಿಲ್ಲಿಸದ ಪುಂಡರ ಕಾರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಆಗ ಪೊಲೀಸರಿಗೆ ಅವಾಜ್ ಹಾಕಿ ಕಾರನ್ನು ವೇಗವಾಗಿ ತಿರುಗಿಸಿಕೊಂಡು ಹೋಗಿದ್ದಾರೆ. ಘಟನೆಯಲ್ಲಿ ಪಿಎಸ್ ಐ ಕೈಗೆ ಗಾಯವಾಗಿದೆ. ಫೇಸ್ ಬುಕ್ ನಲ್ಲಿ ಲೈವ್ ಬಂದು ಪೊಲೀಸರಿಗೆ ಅವಾಜ್ ಹಾಕಿದ್ದು, ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.