ಬೆಂಗಳೂರು: ನಗರದ ಹೆಗ್ಡೆ ಮತ್ತು ಕೆಎಸ್ ಬಾರ್ ಮತ್ತು ರೆಸ್ಟೋರೆಂಟ್‌ಗೆ ನುಗ್ಗಿ ಪುಡಿ ರೌಡಿಗಳ ಗ್ಯಾಂಗ್‌ವೊಂದು ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಬಾರ್ ಕೌಂಟರ್‌ಗೆ ನುಗ್ಗಿ ಕ್ಯಾಶಿಯರ್‌ಗೆ ಪುಡಿ ರೌಡಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪುಂಡರು ಹಲ್ಲೆ ಮಾಡಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ತಡರಾತ್ರಿವರೆಗೂ ಬರ್ತಡೇ ಪಾರ್ಟಿ
ಸೆಪ್ಟೆಂಬರ್ 15ರಂದು ಪುಡಿರೌಡಿಗಳು ಬಾರ್‌ಗೆ ಬಂದಿದ್ದರು, ಅಂದು ತಡರಾತ್ರಿವರೆಗೂ ವಿಲ್ಸನ್ ಜಾಯ್ ಬರ್ತಡೇ ಪಾರ್ಟಿ ಮಾಡಿದ್ದ ಗ್ಯಾಂಗ್. ತುಂಬಾ ಸಮಯವಾಗಿದೆ ಎಂದು ಬಾರ್ ಸಿಬ್ಬಂದಿ ಹೇಳಿದ್ದಕ್ಕೆ ಕಿರಿಕ್ ಮಾಡಿದ್ದ ರೌಡಿಗಳ ಗ್ಯಾಂಗ್. ಬಾರ್ ಸಿಬ್ಬಂದಿ ಜೊತೆ ಜಗಳ ಮಾಡಿ ಹೋಗಿದ್ದ ವಿಲ್ಸನ್ ಜಾಯ್ ಗ್ಯಾಂಗ್. ಮರುದಿನ(ಸೆಪ್ಟೆಂಬರ್ 16) ಬಂದು ಬಾರ್‌ಗೆ ನುಗ್ಗಿ ಕ್ಯಾಶಿಯರ್ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದ ವಿಲ್ಸನ್ ಜಾಯ್ ಗ್ಯಾಂಗ್. ಸದ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವ ಸಂಪಿಗೆಹಳ್ಳಿ ಪೊಲೀಸರು