ಕೊಪ್ಪಳ: ಗಣೇಶ ವಿಸರ್ಜನೆ (Ganesha Visarjan) ಸಂದರ್ಭದಲ್ಲಿ ಯುವಕರ ಮದ್ಯೆ ಗಲಾಟೆ ನಡೆದು ಚಾಕು ಇರಿದ ಘಟನೆ ನಡೆದಿದೆ.
ಈ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಓರ್ವ ಯುವಕನಿಗೆ ಚಾಕು ಇರಿದು, ಮೂವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಗಣೇಶ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಡ್ಯಾನ್ಸ್ ಮಾಡುವ ವಿಚಾರದಲ್ಲಿ ಈ ಗಲಾಟೆ ನಡೆದಿದೆ. ಶಿವು(38) ಎಂಬಾತನಿಗೆ ಚಾಕು ಇರಿಯಲಾಗಿದೆ. ಗಣೇಶ್, ಮಂಜು, ಸಾಗರ್ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.
ಡ್ಯಾನ್ಸ್ ಮಾಡುವ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತೆರಳಿದೆ. ಹೀಗಾಗಿ ಮತ್ತೊಂದು ಯುವಕರ ಗುಂಪು ಚಾಕುವಿನಿಂದ ಇರಿದಿದೆ. ಗಾಯಗೊಂಡಿರುವ ಶಿವುನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರೆ, ಇನ್ನುಳಿದವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.