ಬೆಂಗಳೂರು: ನೂತನವಾಗಿ ಆಯ್ಕೆಯಾದ ಮಾಹಿತಿ ಹಕ್ಕು ಆಯುಕ್ತರ ಪದಗ್ರಹಣ ಕಾರ್ಯಕ್ರಮ ಇಂದು ನಡೆಯಿತು.
ರಾಜಭವನ ಗಾಜಿನ ಮನೆಯಲ್ಲಿ ಪದಗ್ರಹ ಕಾರ್ಯಕ್ರಮ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ವೇಳೆ ಗವರ್ನರ್ ಮಾಹಿತಿ ಹಕ್ಕು ಆಯುಕ್ತರಿಗೆ ಪ್ರಮಾಣವಚನ ಬೋಧನೆ ಮಾಡಿದರು. ಮುಖ್ಯ ಆಯುಕ್ತರಾಗಿ ಆಶಿತ್ ಮೋಹನ್ ಪ್ರಸಾದ್, ಆಯುಕ್ತರಾಗಿ ರಾಮನ್.ಕೆ, ಡಾ. ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ.ಚನ್ನಾಳ, ರಾಜಶೇಖರ ಎಸ್, ಬದ್ರುದ್ದೀನ್ ಕೆ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಮಮತಾ ಬಿ.ಆರ್ ಅವರು ಪ್ರಮಾಣ ವಚನ ಸ್ವೀಕರಿಸಿದರು.