ಅಮರಾವತಿ: ಕೇವಲ 5 ರೂ.ಗೆ ಹೊಟ್ಟೆ ತುಂಬ ಅನ್ನ ವಿತರಿಸುವ ಅನ್ನ ಕ್ಯಾಂಟೀನ್ ಗಳು (Anna Canteen) ಆಂಧ್ರಪ್ರದೇಶದಲ್ಲಿ (Andhra Pradesh) ಮತ್ತೆ ಆರಂಭವಾಗಿವೆ.
ಆಂಧ್ರದಲ್ಲಿ ಟಿಡಿಪಿ ಸರ್ಕಾರದ ಆಡಳಿತದಲ್ಲಿ ಆರಂಭಿಸಲಾಗಿದ್ದ ಕ್ಯಾಂಟೀನ್ ಗಳನ್ನು ವೈಎಸ್ ಆರ್ ಸಿಪಿ ಸರ್ಕಾರವು 2019 ಮತ್ತು 2024 ರ ನಡುವೆ ಬಂದ್ ಮಾಡಿತ್ತು. ಆದರೆ, ಈಗ ಮತ್ತೆ ಅಧಿಕಾರಕ್ಕೆ ಬಂದಿರುವ ಟಿಡಿಪಿ ಪುನರ್ ಆರಂಭಿಸಿದೆ.
ಗುಡಿವಾಡದಲ್ಲಿ ಅನ್ನ ಕ್ಯಾಂಟೀನ್ ಗೆ ಚಾಲನೆ ನೀಡಿದ ಸಿಎಂ ಎನ್. ಚಂದ್ರಬಾಬು ನಾಯ್ಡು (Chandrababu Naidu), ಬಡವರು ಹಸಿವಿನಿಂದ ಬಳಲಬಾರದು ಎಂಬುದು ಈ ಕ್ಯಾಂಟೀನ್ ಗಳ ಮುಖ್ಯ ಉದ್ದೇಶ. 5 ರೂ. ನಲ್ಲಿ ಬಡವರಿಗೆ, ದಿನಗೂಲಿದಾರರಿಗೆ ಮತ್ತು ಕಾರ್ಮಿಕರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಾದ್ಯಂತ ಇಂತಹ 203 ಕ್ಯಾಂಟೀನ್ ಗಳನ್ನು ಪ್ರಾರಂಭಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಕ್ಯಾಂಟೀನ್ ಗಳ ದೈನಿಂದಿನ ನಿರ್ವಹಣೆ ವೆಚ್ಚವಾಗಿ 53 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದ್ದಾರೆ.
ಬಡವರ ಖಾಲಿ ಹೊಟ್ಟೆಯನ್ನು ತುಂಬಿಸುವುದಕ್ಕಿಂತ ತೃಪ್ತಿಕರವಾದ ಮತ್ತೊಂದು ಕೆಲಸ ಯಾವುದಿಲ್ಲ ಎಂದು ಹೇಳುವುದರ ಮೂಲಕ ಹಿಂದಿನ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಚಂದ್ರಬಾಬು ನಾಯ್ಡು ಮತ್ತು ಅವರ ಪತ್ನಿ ನಾರಾ ಭುವನೇಶ್ವರಿ ಗುಡಿವಾಡದಲ್ಲಿ ಅನ್ನ ಕ್ಯಾಂಟೀನ್ ಗೆ ಚಾಲನೆ ನೀಡಿದರು.