ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ (Annapoorneshwari Police Station) ಶಾಮಿಯಾನ ಹಾಕಿರುವ ಹಿಂದಿನ ಕಾರಣ ರಿವೀಲ್ ಆಗಿದೆ.
ನಟ ದರ್ಶನ್ (Challenging Star Darshan), ಗೆಳತಿ ಪವಿತ್ರಾ ಗೌಡ (Pavithra Gowda) ಸಹಿತ ರೇಣುಕಾಸ್ವಾಮಿ (Renukaswamy Case) ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿದ್ದ ಪೊಲೀಸ್ ಠಾಣೆಯ ಆವರಣದ ಗೋಡೆಗೆ ಶಾಮಿಯಾನ ಹಾಕಲಾಗಿತ್ತು. ಈ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಶಾಮಿಯಾನದ ಸೈಡ್ ವಾಲ್ ಹಾಕಿಸಿದ್ದು ನಟ ದರ್ಶನ್ಗಾಗಿಯೇ ಎಂಬ ಸತ್ಯ ಬಯಲಾಗಿದೆ. ಪೊಲೀಸರ ಮುಂದೆ ದರ್ಶನ್ ಮನವಿ ಹಿನ್ನೆಲೆಯಲ್ಲಿ ಪೊಲೀಸರು ಈ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.
ಸಾರ್ ನನಗೆ ಒಂದೇ ಕಡೆ ಕುಳಿತುಕೊಳ್ಳಲು ಆಗುವುದಿಲ್ಲ. ನಾನು ವಾಕ್ ಮಾಡಬೇಕು. ನನ್ನ ಕೈಲಿ ಆಗುತ್ತಿಲ್ಲ. ನನ್ನ ಬಾಡಿ ರಿಲ್ಯಾಕ್ಸ್ ಆಗಬೇಕು. ಸಿಗರೇಟ್ ಇಲ್ಲವಾದರೆ ನನ್ನ ಕೈ ನಡುಗುತ್ತೆ. ನೀವು ಪದೇ ಪದೇ ಪ್ರಶ್ನೆ ಮಾಡುತ್ತಲೇ ಇದ್ದೀರಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ತಿರುಗಾಡಲು ಸೈಡ್ ವಾಲ್ ಹಾಕಿದ್ದಾರೆ ಎನ್ನಲಾಗಿದೆ.
