ಬೆಂಗಳೂರು: ಎಂತಹ ತಂದೆ- ತಾಯಿ ಆದರೂ ಸರಿ ಇಂತಹ ಪರಿಸ್ಥಿತಿಯನ್ನೂ ಎಂದಿಗೂ ಊಹಿಸಿರುವುದಿಲ್ಲ. ಕೈಯಲ್ಲಿ ಅಧಿಕಾರ, ವರ್ಚಸ್ಸು ಇದ್ದರೂ ಈ ಕುಟುಂಬಕ್ಕೆ ಕೆಟ್ಟ ಸ್ಥಿತಿ ಬಂದಿದೆ. ದುರಾಚಾರಗಳಿಗೆ ಒಳಗಾಗಿ ಮಕ್ಕಳು ಮಾಡಿದ ತಪ್ಪಿಗೆ ತಾಯಿ ಕಣ್ಣೀರು ಹಾಕಬೇಕಿದೆ.
ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಮತ್ತು ಅವರ ಪತ್ನಿ ಭವಾನಿ ರೇವಣ್ಣ ಕಳೆದ ಪರಪ್ಪನ ಅಗ್ರಹಾರಕ್ಕೆ ಮಕ್ಕಳನ್ನು ನೋಡಲು ಆಗಮಿಸಿದ್ದರು. ಲೈಂಗಿಕ ದುರಾಚಾರಗಳ ಆರೋಪದಲ್ಲಿ ಸೆಲಿಬ್ರಿಟಿ ಇಬ್ಬರೂ ಸೆಲಿಬ್ರಿಟಿ ಮಕ್ಕಳು ಜೈಲು ಸೇರಿದ್ದಾರೆ. ಕೆಲ ದಿನಗಳ ಹಿಂದೆ ರೇವಣ್ಣ ಮತ್ತು ಭವಾನಿ ಪ್ರತ್ಯೇಕವಾಗಿ ಸೆಂಟ್ರಲ್ ಜೈಲಿಗೆ ಬಂದು ಡಾ. ಸೂರಜ್ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣರನ್ನು ನೋಡಿಕೊಂಡು ಹೋಗಿದ್ದರು. ಇವತ್ತು ಇಬ್ಬರೂ ಜೊತೆಯಾಗಿ ಸೆಂಟ್ರಲ್ ಜೈಲಿಗೆ ಆಗಮಿಸಿದ್ದರು.
ಮಾಧ್ಯಮದವರ ಕಣ್ಣಿಗೆ ಬೀಳದಂತೆ ದಂಪತಿ ಬಂದು ಮಕ್ಕಳನ್ನು ನೋಡಿಕೊಂಡು ಹೋಗಿದ್ದಾರೆ.