ಬೆಂಗಳೂರು : ದೀಪಾವಳಿಯ ಪ್ರಯುಕ್ತ ರಜೆಯಿಂದಾಗಿ ಊರಿನತ್ತ ಮುಖ ಮಾಡಿದ್ದ ಜನ ಇದೀಗ ಮತ್ತೆ ರಾಜಧಾನಿಗೆ ಹಿಂದಿರುಗಿದ್ದಾರೆ. ಈ ಹಿನ್ನೆಲೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದೆ.
ದೀಪಾವಳಿಗೆ ಸಾಲುಸಾಲು ರಜೆ ಹಿನ್ನೆಲೆ ಕಳೆದ ಶುಕ್ರವಾರ ಜನರು ತಮ್ಮತಮ್ಮ ಊರಿಗೆ ಪಯಾಣ ಬೆಳೆಸಿದ್ದರು. ಈಗ ಹಬ್ಬ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಈ ಹಿನ್ನೆಲೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ರಷ್ ಆಗಿದೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದ್ದು, ಮೆಟ್ರೋಗಾಗಿ ಜನ ಕ್ಯೂ ನಿಂತಿದ್ದಾರೆ. ಮೆಟ್ರೋ ನಿಲ್ದಾಣ ಒಳ ಭಾಗದಲ್ಲೂ ಜನದಟ್ಟಣೆ ಉಂಟಾಗಿದೆ. ಇನ್ನು ಮೆಜೆಸ್ಟಿಕ್ ಮೆಟ್ರೋ ಪ್ರಯಾಣಿಕರಿಂದ ತುಂಬಿಕೊಂಡಿದೆ. ಮೆಟ್ರೋ ಒಳಭಾಗದಲ್ಲೂ ಪ್ರಯಾಣಿಕರ ದಟ್ಟಣೆ ಉಂಟಾಗಿದೆ.



















