ಬೆಂಗಳೂರು : ಇಸ್ರೋ ಸಂಸ್ಥೆಯ ನಿವೃತ್ತ ನೌಕರ ಉಸಿರುಗಟ್ಟಿಸಿ ಪತ್ನಿಯ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆವಲಹಳ್ಳಿಯ ವಿರ್ಟುಸೊ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಸಂದ್ಯಾಶ್ರೀ (65) ಕೊಲೆಯಾದ ವೃದ್ದ ಪತ್ನಿ.
ಪತ್ನಿ ಸಂದ್ಯಾಶ್ರೀಯ ಉಸಿರುಗಟ್ಟಿಸಿ ಪತಿ ನಾಗೇಶ್ವರ್ ರಾವ್ (75) ಕೊಲೆ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಆಲವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗೇಶ್ವರ್ ರಾವ್, ಇಸ್ರೋ ಸಂಸ್ಥೆಯ ನಿವೃತ್ತ ನೌಕರರು. ಪತ್ನಿ ಸಂದ್ಯಾಶ್ರೀ ಅವರೊಂದಿಗೆ ವಿರ್ಟುಸೊ ಅಪಾರ್ಟ್ಮೆಂಟ್ನಲ್ಲಿ ಮೂರ ವರ್ಷಗಳಿಂದ ನೆಲೆಸಿದ್ದರು.
ಪ್ರಾಥಮಿಕ ವಿಚಾರಣೆ ವೇಳೆ ನಾನು ಸತ್ತರೆ ಪತ್ನಿಯನ್ನು ಯಾರು ನೋಡುಕೊಳ್ಳುತ್ತಾರೆ, ಯಾರೂ ಸಂಬಂಧಿಕರು ಇಲ್ಲ, ಆಕೆಯ ಮುಂದಿನ ಜೀವನ ಹೇಗೆ? ಹಾಗಾಗಿ ಆಕೆಯನ್ನ ಕೊಲೆ ಮಾಡಿದೆ ಎನ್ನುತ್ತಿರುವ ನಾಗಲೇಶ್ವರ ರಾವ್, ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ. ಇನ್ನು ದಂಪತಿಗೆ ಓರ್ವ ಮಗಳಿದ್ದು, ಆಕೆ ಅಮೆರಿಕದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಭೀಕರ ರಸ್ತೆ ಅಪಘಾತ | ತಂದೆ-ತಾಯಿ, ಮಗಳು ಸ್ಥಳದಲ್ಲೇ ಸಾ*ವು



















