ಬೆಂಗಳೂರು : ನಗರದಲ್ಲಿ ಮನೆಗಳ್ಳರ ಹಾವಳಿ ದಿನೆ ದಿನೇ ಹೆಚ್ಚುತ್ತಲೇ ಇವೆ. ರಾತ್ರಿ ವೇಳೆ ಫೀಲ್ಡ್‌ಗೆ ಇಳಿಯುತ್ತಿರುವ ಕಳ್ಳರು ಮನೆಗಳ ಬಾಗಿಲು ಬಳಿ ಹೋಗಿ ಕಳ್ಳತನಕ್ಕೆ ಯತ್ನಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಇದೇ ತಿಂಗಳ 4ನೇ ತಾರೀಖು ಬುಧವಾರ ರಾತ್ರಿ ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸಿಎಸ್ ಲೇಔಟ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ. ಮನೆಯೊಂದಕ್ಕೆ ಬಂದ ಕಳ್ಳ ಗೇಟ್ ಮೇಲೆ ಹತ್ತಿ ಒಳಗೆ ಪ್ರವೇಶಿಸಲು ಪ್ರಯತ್ನಿಸಿದ್ದಾನೆ.
ಚಪ್ಪಲಿ ಹಾಕಿಕೊಂಡರೆ ಶಬ್ದ ಬರುತ್ತದೆ ಎಂಬ ಕಾರಣಕ್ಕೆ ಕಳ್ಳನು ಬರಿಗಾಲಿನಲ್ಲಿ ಬಂದಿರುವುದು ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಬಳಿಕ ಮನೆಯ ಬಾಗಿಲು ತೆಗೆಯಲು ಸಾಕಷ್ಟು ಸಮಯ ಸರ್ಕಸ್ ಮಾಡಿದರೂ ಕಳ್ಳನಿಗೆ ಯಶಸ್ಸು ಸಿಗಲಿಲ್ಲ ಎನ್ನಲಾಗಿದೆ.
ಕಳ್ಳನ ಈ ಸಂಪೂರ್ಣ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಗೊಂಡಿದ್ದು, ಘಟನೆ ಸಂಬಂಧ ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಈ ಘಟನೆ ಬಳಿಕ ಸ್ಥಳೀಯ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ IOCL ಸಂಸ್ಥೆಯಲ್ಲಿ 144 ಹುದ್ದೆಗಳ ನೇಮಕ.. ಎಸ್ಸೆಸ್ಸೆಲ್ಸಿ, ಪಿಯುಸಿ ಪಾಸಾಗಿದ್ದರೆ ಸಾಕು!



















