ಒಮಾನ್: ಒಮಾನ್ (Oman) ಕರಾವಳಿಯಲ್ಲಿ ಹಡಗು ಮುಳುಗಿ ನಾಪತ್ತೆಯಾಗಿದ್ದ 16 ಜನರ ಪೈಕಿ 9 ಜನರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ರಕ್ಷಿಸಲಾಗಿರುವ 9 ಜನರ ಪೈಕಿ 8 ಜನರು ಭಾರತೀಯರು ಮತ್ತು ಒಬ್ಬರು ಶ್ರೀಲಂಕಾದವರು ಎಂದು ಮೂಲಗಳು ತಿಳಿಸಿವೆ. ಒಮಾನ್ನ ಪ್ರಮುಖ ಬಂದರು ಡುಗ್ಮ್ ನಿಂದ(Duqm )ಹೊರಟಿದ್ದ ಪ್ರೆಸ್ಟೀಜ್ ಪಾಲ್ಕನ್ ಹಡಗು (MT Falcon Prestige) ಒಮಾನ್ ಸಾಗರ ಪ್ರದೇಶದಲ್ಲಿ ಮಗುಚಿದೆ. ಹಡಗಿನಲ್ಲಿ ಪೂರ್ವ ಕಾರ್ಮೋಸ್ ದೇಶದ ತೈಲ ಟ್ಯಾಂಕರ್ ಇತ್ತು ಎಂದು ಸಾಗರ ಭದ್ರತಾ ಕೇಂದ್ರ ಹೇಳಿದೆ. ಇದು ಯೆಮನ್ ಅದೆನ್ಗೆ ಹೊರಟಿತ್ತು ಎಂದು ಹೇಳಲಾಗಿದೆ.
ಭಾರತೀಯ ರಾಯಭಾರ ಕಚೇರಿಯು ಒಮಾನಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಶೋಧ ಮತ್ತು ರಕ್ಷಣಾ (ಎಸ್‌ಎಆರ್) ಕಾರ್ಯಾಚರಣೆಯನ್ನು ಒಮನ್ ಸಮುದ್ರ ಭದ್ರತಾ ಕೇಂದ್ರವು ಸಮನ್ವಯಗೊಳಿಸುತ್ತಿದೆ.
ಭಾರತೀಯ ನೌಕಾಪಡೆಯ ಯುದ್ಧನೌಕೆ INS Teg ಅನ್ನು ಸಮುದ್ರ ಕಣ್ಗಾವಲು ವಿಮಾನ P-8I ಜೊತೆಗೆ ಒಮಾನಿ ಹಡಗುಗಳು ಮತ್ತು ಸಿಬ್ಬಂದಿಗಳೊಂದಿಗೆ ನಿಯೋಜಿಸಲಾಗಿದೆ ಎಂದು ಎಎನ್ ಐ ತಿಳಿಸಿದೆ.
