ನಟ ಪವನ್ ಕಲ್ಯಾಣ್ (Pawan Kalyan) ಈಗ ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಸಿನಿಮಾ ಮಂದಿ ಅವರ ಬಳಿ ಸಮಸ್ಯೆ ಪರಿಹರಿಸಬೇಕೆಂದು ಹೋಗಲು ಸಿದ್ಧರಾಗಿದ್ದಾರೆ.
ತೆಲುಗು ಸಿನಿಮಾಗಳು ಥಿಯೇಟರ್ ವಿಚಾರದಲ್ಲಿ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನಲೆ ಪವನ್ ಕಲ್ಯಾಣ್‌ರನ್ನು ಸೌತ್‌ನ ಖ್ಯಾತ ನಿರ್ಮಾಪಕರು ಭೇಟಿಯಾಗಲಿದ್ದಾರೆ. ಪುಷ್ಪ 2’ (Pushpa 2) ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕ ನವೀನ್ ಮತ್ತು ರವಿಶಂಕರ್, ‘ಆರ್‌ಆರ್‌ಆರ್’ ಸಿನಿಮಾದ ನಿರ್ಮಾಪಕ ಡಿವಿವಿ ದಾನಯ್ಯ, ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ನಿರ್ಮಾಪಕ, ಖ್ಯಾತ ನಿರ್ಮಾಪಕ ದಿಲ್ ರಾಜು, ನಾಗ ವಂಶಿ ಸೇರಿದಂತೆ ಅನೇಕ ನಿರ್ಮಾಪಕರು ಜೊತೆಯಾಗಿ ನಟ ಪವನ್ ಕಲ್ಯಾಣ್ ರನ್ನು ಭೇಟಿ ಮಾಡಿ ಚಿತ್ರರಂಗದ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಥಿಯೇಟರ್ ಸಮಸ್ಯೆ, ಟಿಕೆಟ್ ದರ ಸೇರಿದಂತೆ ಹಲವು ವಿಚಾರಗಳನ್ನು ನಿವಾರಿಸುವ ಸಲುವಾಗಿ ಪವನ್ ಕಲ್ಯಾಣ್‌ಗೆನಿರ್ಮಾಪಕರು ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಪವನ್ ಕಲ್ಯಾಣ್ ಯಾವ ರೀತಿ ಸ್ಪಂದಿಸುತ್ತಾರೋ ಕಾಯ್ದು ನೋಡಬೇಕಿದೆ.