ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ (Supreme Court) ಮಧ್ಯೆ ಪ್ರವೇಶಿಸುವಂತೆ ವಕೀಲರು ಮನವಿ ಮಾಡಿದ್ದಾರೆ.
ಮಧ್ಯೆ ಪ್ರವೇಶಿಸುವಂತೆ ಮುಖ್ಯ ನ್ಯಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರಿಗೆ ಬೆಂಗಳೂರಿನ ವಕೀಲ ಸಚಿನ್ ದೇಶಪಾಂಡೆ ಪತ್ರ ಬರೆದು ಮನವಿ ಮಾಡಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧ 2017ರಿಂದ ಬಾಕಿ ಉಳಿದಿರುವ ಹಲವು ಪ್ರಕರಣಗಳ ತನಿಖೆಗೆ ಯಾವುದೇ ವಿವರಣೆ ನೀಡಿದೆ ಸುಪ್ರೀಂ ಕೋರ್ಟ್ ತಡಯಾಜ್ಞೆ ನೀಡಿದೆ.
ಬಿಎಸ್ ಯಡಿಯೂರಪ್ಪ ಅವರ ವಿರುದ್ಧದ ಪಿಸಿ ಕಾಯ್ದೆಯಡಿ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣಗಳನ್ನು ಹೈಕೋರ್ಟ್ ವಜಾ ಮಾಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮತ್ತು ಲೋಕಾಯುಕ್ತ ಹಾಗೂ ಭ್ರಚಾರ ನಿಗ್ರಹ ದಳ ಸುಪ್ರೀಂ ಕೋರ್ಟನಲ್ಲಿ ಪ್ರಶ್ನಿಸಿದಾಗ ಸುಪ್ರೀಂ ಕೋರ್ಟ್ ಯಾವುದೇ ವಿವರಣೆ ನೀಡಿದೆ ತಡೆ ನೀಡಿದೆ. ಹೀಗಾಗಿ ಮಧ್ಯೆ ಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.