ಪಾಕಿಸ್ತಾನದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದು ನಡೆದಿದೆ. ಪಾಕಿಗಳ ವಿರುದ್ಧ ಸಂಘರ್ಷಕ್ಕಿಳಿದಿದ್ದ ಬಲೂಚಿಗಳು ಇದೀಗ ತಮ್ಮನ್ನು ತಾವು ಸ್ವತಂತ್ರ ರಾಷ್ಟ್ರ ಅಂತಾ ಘೋಷಿಸಿಕೊಂಡಿದ್ದಾರೆ.
ರಿಪಬ್ಲಿಕ್ ಆಫ್ ಬಲೂಚಿಸ್ತಾನ್ ಅಂತಾ ಘೋಷಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲಾ ನಮಗೆ ಸ್ವತಂತ್ರ ರಾಷ್ಟ್ರದ ಮಾನ್ಯತೆ ನೀಡಿ ಅಂತಾ ವಿಶ್ವಸಂಸ್ಥೆಗೂ ಬಲೂಚ್ ಮನವಿ ಮಾಡಿದೆ. ಪ್ರತ್ಯೇಕ ರಾಷ್ಟ್ರದ ಸ್ಥಾನ ಮಾನ ನೀಡಿ ನಮ್ಮ ಸ್ವಾತಂತ್ರಕ್ಕಾಗಿನ ಹೋರಾಟಕ್ಕೆ ಬೆಂಬಲ ನೀಡುವಂತೆ ಬಲೂಚ್ ಯುಎನ್ ಗೆ ಕೋರಿದೆ. ಇದೇ ವೇಳೆ ಭಾರತದ ನಿಲುವನ್ನು ಬಲೂಚಿಗಳು ಸ್ವಾಗತಿಸಿದ್ದಾರೆ. ಪಿಒಕೆ ಭಾರತದ ಅವಿಭಾಜ್ಯ ಅಂಗ. ಅದನ್ನು ಭಾರತಕ್ಕೇ ಬಿಟ್ಟುಕೊಡಬೇಕು ಅಂತಾ ಪಾಕ್ ಗೆ ಬಲೂಚಿಗಳು ತಾಕೀತು ಮಾಡಿದ್ದಾರೆ.
ದಶಕಗಳಿಂದ ತಮ್ಮ ಸ್ವಾತಂತ್ರಕ್ಕಾಗಿ ರಕ್ತಸಿಕ್ತ ಹೋರಾಟಕ್ಕಿಳಿದ್ದ ಬಲೂಚ್ ಇದೇ ಸೂಕ್ತ ಸಂದರ್ಭ ಅಂತಾ ಭಾವಿಸಿ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿದೆ. ಭಾರತದ ಆಪರೇಷನ್ ಸಿಂಧೂರದಿಂದ ಕಂಗಾಲಾಗಿರೋ ಪಾಕ್ ಬಲೂಚಿಗಳನ್ನು ಹೇಗೆ ನಿಭಾಯಿಸುತ್ತೆ ಅನ್ನೋದು ಈಗಿನ ಪ್ರಶ್ನೆ.