ಚಿತ್ರದುರ್ಗ: ರೇಣುಕಾಸ್ವಾಮಿ ಮನೆಯಲ್ಲಿ ಪುತ್ರನ ನಾಮಕರಣ ಶಾಸ್ತ್ರ ನಡೆದಿದ್ದು, ಮಗನನ್ನು ನೆನೆದು ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇಂದು ಮನೆಯಲ್ಲಿ ನಾಮಕರಣ ಶಾಸ್ತ್ರ ನಡೆಯಿತು. ಕಾರ್ಯಕ್ರಮದ ನಂತರ ರೇಣುಕಸ್ವಾಮಿ ತಾಯಿ ರತ್ನಪ್ರಭ ಮಾತನಾಡುತ್ತ ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಾಮಕರಣಶಾಸ್ತ್ರದ ಹಿನ್ನೆಲೆಯಲ್ಲಿ ಮಗನನ್ನು ನೆನೆದು ರತ್ನಪ್ರಭ ಭಾವುಕರಾಗಿ ಅತ್ತಿದ್ದಾರೆ.
ಮಾತನಾಡುತ್ತ ದುಖಃ ತಡೆಯಲಾಗದೆ ಗೋಡೆಗೆ ಒರಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನನ್ನ ಮಗ ಇದ್ದಿದ್ದರೆ ಇನ್ನೂ ಜೋರಾಗಿ ನಾಮಕರಣ ಮಾಡುತ್ತಿದ್ದೇವು. ಮೊಮ್ಮಗನ ರೂಪದಲ್ಲಿ ನಮ್ಮಮನೆಗೆ ರೇಣುಕಾಸ್ವಾಮಿಯೇ ಬಂದಿದ್ದಾನೆ. ಈಗ ನಮ್ಮ ಮನೆಯಲ್ಲಿ ಅದೇ ಸಂತೋಷ ಎಂದು ಅತ್ತಿದ್ದಾರೆ.



















