ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ಗೆ ನಟ ದರ್ಶನ್ (Darshan), ಪವಿತ್ರಾ ಗೌಡ ಮತ್ತು ಗ್ಯಾಂಗ್ ಹಾಜರಾಗಿದ್ದರು.
ವಿಚಾರಣೆಯನ್ನು ಕೋರ್ಟ್ ಏ.8 ಕ್ಕೆ ಕೋರ್ಟ್ ಮುಂದೂಡಿದೆ. 57ನೇ ಸೆಷನ್ಸ್ ಕೋರ್ಟ್ ನಲ್ಲಿ ಮಂಗಳವಾರ ಆರೋಪಿ ದರ್ಶನ್ ಮತ್ತು ಗ್ಯಾಂಗ್‌ನ ವಿಚಾರಣೆ ನಡೆಯಿತು. ಆರೋಪಿಗಳಾದ ನಿಖಿಲ್ ಮತ್ತು ಕೇಶವಮೂರ್ತಿ ಗೈರಾಗಿದ್ದರು. ಇನ್ನುಳಿದಂತೆ ಎಲ್ಲ ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು.
ಕೋರ್ಟ್ ನಲ್ಲಿ ಪೊಲೀಸರ ವಿರುದ್ಧ ದರ್ಶನ್ ಪರ ವಕೀಲರ ಆರೋಪ ಮಾಡಿದ್ದಾರೆ. ಇನ್ನಿತರ ಆರೋಪಿಗಳನ್ನು ಮಾಫಿ ಸಾಕ್ಷಿ ಆಗಲು ಒತ್ತಡ ಹೇರುತ್ತಿದ್ದಾರೆ. ಬೇರೆ ಆರೋಪಿಗಳಿಗೆ ಮಾಫಿ ಸಾಕ್ಷಿ ಆಗಿ ಅಂತ ಒತ್ತಡ ಹೇರಲಾಗುತ್ತಿದೆ. ಇತರೆ ಆರೋಪಿಗಳು ತಪ್ಪು ಒಪ್ಪಿಕೊಂಡರೆ ಮಾಫಿ ಸಾಕ್ಷಿ ಮಾಡುತ್ತೇವೆ ಅಂತಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ಈ ವೇಳೆ ಕೋರ್ಟ್ ಏ. 8ಕ್ಕೆ ವಿಚಾರಣೆ ಮುಂದೂಡಿತು.