ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಕೊಲೆಯ ಕೇಸ್ ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಅವರನ್ನು ವಶಕ್ಕೆ ಪಡೆಯಲಾಗಿದೆ. 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆದರೆ, ಸಾವಿನ ಬಗ್ಗೆ ದರ್ಶನ್ ಹಾಗೂ ಪವಿತ್ರಾ ಅವರಿಗೆ ಶೇ. 1ರಷ್ಟು ಗೊತ್ತಿಲ್ಲ. ಯಾರೋ ಮಾಡಿರುವ ತಪ್ಪಿಗೆ ಅವರು ತಲೆದಂಡವಾಗುತ್ತಿದ್ದಾರೆ. ನಾನು ಅವರನ್ನು ಉಳಿಸಲು ಮಾತನಾಡುತ್ತಿಲ್ಲ. ಇದು ಸತ್ಯ ಎಂದು ಹೇಳಿದ್ದಾರೆ.
ಪೊಲೀಸರು ಬಂದು ಹೇಳುವವರೆಗೂ ದರ್ಶನ್ ಗೆ ಆ ಕುರಿತು ಗೊತ್ತೇ ಇಲ್ಲ. ದರ್ಶನ್ ಹೊಡೆದಿದ್ದಾರೆ ಎಂಬುವುದಕ್ಕೆ ಸಾಕ್ಷಿ ಇಲ್ಲ. ಇಲ್ಲಿ ಪವಿತ್ರಾ ಗೌಡರದ್ದು ತಪ್ಪಿಲ್ಲ. ನಾನು ಶವದ ಫೋಟೋ ನೋಡಿದ್ದೇನೆ. ಯಾರೋ ಹೊಡೆದ ಗಾಯಗಳಲ್ಲ. ನಾಯಿ ಕಚ್ಚಿರುವ ಗಾಯಗಳು ಅವು. ಮರಣೋತ್ತರ ಪರೀಕ್ಷೆ ಬಂದಮೇಲೆ ಎಲ್ಲದಕ್ಕೂ ಉತ್ತರ ಸಿಗುತ್ತದೆ” ಎಂದು ವಕೀಲ ನಾರಾಯಣಸ್ವಾಮಿ ಹೇಳಿದ್ದಾರೆ.
ಮುಗ್ಧರಿಗೆ ಶಿಕ್ಷೆ ಆಗಬಾರದು. ರೇಣುಕಾಸ್ವಾಮಿಗೆ ಕುಡಿತದ ಚಟ ಇರಬಹುದು. ನಾವು ಹೊಡೆದಿದ್ದೇವೆ ಅಂತ ದರ್ಶನ್ ಆಗಲೀ, ಪವಿತ್ರಾ ಗೌಡ ಅವರಾಗಲೀ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.