ಬೆಂಗಳೂರು: ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಆಂಡ್ ಗ್ಯಾಂಗ್ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದೆ. ಜಾಮೀನು ರದ್ದು ಮಾಡಬೇಕೆಂದು ಸರ್ಕಾರ ಸುಪ್ರೀಂಗೆ ಅರ್ಜಿ ಸಲ್ಲಿಸಿದೆ. ಪ್ರಕರಣಕ್ಕೆ ಸಂಬಂದಿಸಿದಂತೆ ಸುಪ್ರಿಂಕೋರ್ಟ್ ನಲ್ಲಿ (supreme court) ಇದೇ ಶುಕ್ರವಾರವೇ ವಿಚಾರಣೆ ನಡೆಯಲಿದೆ.
ಸುಪ್ರಿಂ ಕೋರ್ಟ್ ನ್ಯಾ. ಪರ್ದಿವಾಲ ಮತ್ತು ನ್ಯಾ.ಮಹದೇವನ್ ಪೀಠದಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯಲಿದೆ. ಹೀಗಾಗಿ ಪೊಲೀಸರ ಪರ ನೇಮಕವಾಗಿರುವ ವಕೀಲ ಅನಿಲ್ ಸಿ ನಿಶಾನಿ (anil c nishani) ಭೇಟಿ ಮಾಡಿರುವ ಎಸ್ ಪಿಪಿ ಪ್ರಸನ್ನ ಕುಮಾರ್ (Prasanna Kumar) ಚರ್ಚೆ ನಡೆಸಿದ್ದಾರೆ.
ನಟ ದರ್ಶನ್ ಮತ್ತು ಪವಿತ್ರಾಗೌಡ ಸೇರಿದಂತೆ 7 ಜನ ಆರೋಪಿಗಳು ಜಾಮೀನನ್ನು ಎಸ್ ಎಲ್ ಪಿ ಪ್ರಶ್ನಿಸಿದ್ದರು. ಆರೋಪಿಗಳಿಗೆ ಡಿಸೆಂಬರ್ 13 ರಂದು ಪೂರ್ಣಾವಧಿಗೆ ಜಾಮೀನು ಮಂಜೂರಾಗಿತ್ತು. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಡಿಸೆಂಬರ್ ಅಂತ್ಯದಲ್ಲಿ ರಾಜ್ಯ ಸರ್ಕಾರ, ಸುಪ್ರೀಂ ಕೋರ್ಟ್‌ಗೆ(Supreme Court) ಮೇಲ್ಮನವಿ ಸಲ್ಲಿಸಿದೆ.