ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣಕ್ಕೆ ನಟ ದರ್ಶನ್ ಹಾಗೂ ಸಹಚರರಿಗೆ ಹೈಕೋರ್ಟ್ ನಿಂದ ಜಾಮೀನು ಮಂಜೂರಾಗಿರುವುದನ್ನು ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಮಂಗಳವಾರ (ಜು.22) ಸುಪ್ರೀಂಕೋರ್ಟ್‌ನಲ್ಲಿ ನಡೆದಿದೆ.
ನ್ಯಾ | ಪರ್ದಿವಾಲ ಹಾಗೂ ನ್ಯಾ| ಮಹೇಂದ್ರನ್ ಅವರಿರುವ ಪೀಠವು ವಿಚಾರಣೆ ನಡೆಸಿದೆ.
ದರ್ಶನ್ ಪರ ವಕೀಲ ಸಿದ್ದಾರ್ಥ್ ದವೆ ವಾದ ಮಂಡಿಸಿದ್ದಾರೆ. ಕಪಿಲ್ ಸಿಬಲ್ ವಿಚಾರಣೆ ಹಾಜರಾಗುತ್ತಿಲ್ಲ. ಅವರು ಬೇರೊಂದು ಕೇಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕೇಸ್ ನಿನ್ನೆ ರಾತ್ರಿ ನನಗೆ ಬಂದಿದೆ. ಹೀಗಾಗಿ ಒಂದು ದಿನದ ಕಾಲಾವಕಾಶ ಕೋರಿ ಮನವಿ ಮಾಡಿದ್ದಾರೆ.
ನಾನು ಬಂಧನದ ಕಾರಣಗಳ ಬಗ್ಗೆ ವಾದ ಮಂಡಿಸುವುದಿಲ್ಲ. ಕೇಸ್‌ನ ಮೆರಿಟ್ಸ್ ಮೇಲೆ ವಾದ ಮಂಡಿಸುತ್ತೇನೆ ಎಂದು ಸಿದ್ದಾರ್ಥ್ ಹೇಳಿದ್ದಾರೆ.
ನೀಡಬೇಕಿರುವ ದಾಖಲೆ ಕೋರ್ಟ್‌ಗೆ ಕೊಡಿ. ಹೇಳಬೇಕಿರುವುದನ್ನು ಲಿಖಿತ ರೂಪದಲ್ಲಿ ಸಲ್ಲಿಸಿ ಎಂದು ನ್ಯಾಯಪೀಠ ದರ್ಶನ್ ಪರ ವಕೀಲರಿಗೆ ಸೂಚಿಸಿದೆ.
ವಾದವನ್ನು ಆಲಿಸಿರುವ ಕೋರ್ಟ್ ವಿಚಾರಣೆಯನ್ನು ಗುರುವಾರ (ಜು.24) ಕ್ಕೆ ಮುಂದೂಡಿ ಆದೇಶಿಸಿದೆ.
ಗುರುವಾರ 15 ನಿಮಿಷ ಮಾತ್ರ ವಾದ ಮಂಡನೆಗೆ ಅವಕಾಶ ನೀಡಲಾಗಿದ್ದು, ಅಂದೇ ಬೇಲ್ ನಿರ್ಧಾರವಾಗುವ ಸಾಧ್ಯತೆಯಿದೆ.
ಈ ಹಿಂದೆ ಬಂಧನದ ಕಾರಣಗಳನ್ನಷ್ಟೆ ನಾವು ಕೇಳಿದ್ದೇವೆ. ಬೇರೆ ಯಾವುದನ್ನು ಕೇಳುತ್ತಿಲ್ಲ. ಬಂಧನ ಕಾನೂನು ಬದ್ಧವಾಗಿಲ್ಲ ಎನ್ನುವುದಾದ್ರೆ, ಅದಕ್ಕೆ ಉತ್ತರ ಕೊಡಿ ಎಂದು ರಾಜ್ಯ ಸರ್ಕಾರದ ಪರ ವಕೀಲರಿಗೆ ಕೋರ್ಟ್ ಹೇಳಿತ್ತು.
ದರ್ಶನ್ ಬಂಧನಕ್ಕಿದ್ದ ಲೀಡ್ ಏನು? ಎಂದು ಸುಪ್ರೀಂ ಪ್ರಶ್ನಿಸಿತ್ತು. ಇದಕ್ಕೆ ಸರ್ಕಾರದ ಪರ ವಕೀಲರು ಬಂಧನದ ವಿವರವಾದ ದಾಖಲೆಯನ್ನು ಕೋರ್ಟ್‌ಗೆ ಸಲ್ಲಿಸಿತ್ತು.



















