ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸದಲ್ಲಿರುವ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾವಣೆ ಅರ್ಜಿಯನ್ನು ವಜಾ ಮಾಡಿದ್ದು, ಕನಿಷ್ಠ ಸೌಲಭ್ಯ ನೀಡುವಂತೆ ಕೋರ್ಟ್ ಆದೇಶಿಸಿದೆ.
ಈ ಸಂಬಂಧಿಸಿದಂತೆ ಸದ್ಯಕ್ಕೆ ಕೋರ್ಟ್ ಆದೇಶದ ಪ್ರತಿ ಜೈಲು ಅಧಿಕಾರಿಗಳ ಕೈ ಸೇರಿದ್ದು, ಇಂದು ಸೆಂಟ್ರಲ್ ಜೈಲ್ ನಲ್ಲಿ ಜೈಲಾಧಿಕಾರಿಗಳ ನಡುವೆ ಸಭೆ ನಡೆಸಿ, ದರ್ಶನ್ ನನ್ನು ಜೈಲಿನ ಒಳಗೆ ಸ್ಥಳಾಂತರ ಮಾಡುವುದೆ ಅಥವಾ ಕ್ವಾರಂಟೈನ್ ಸೆಲ್ ನಲ್ಲೇ ಮುಂದುವರೆಸುವುದೆ ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಒಳಗಡೆ ಸೆಕ್ಯೂರಿಟಿ ಬ್ಯಾರಕ್ ಗೆ ಶಿಪ್ಟ್ ಮಾಡಿದರೆ ಹೆಚ್ಚು ಖೈದಿಗಳ ಜಮಾವಣೆ ಆಗುವ ಹಿನ್ನಲೆಯಲ್ಲಿ ಕ್ವಾರಂಟೈನ್ ಸೆಲ್ ನಲ್ಲಿ ಇರಿಸುವ ಸಾಧ್ಯತೆ ಇದೆ. ಆದರೆ ಸದ್ಯ ಮುಖ್ಯ ಅಧೀಕ್ಷಕರು ಹೈದ್ರಾಬಾದ್ ನಲ್ಲಿ ಟ್ರೈನಿಂಗ್ ನಲ್ಲಿದ್ದು, ಅವರು ಬಂದ ಬಳಿಕ ಸೆಲ್ ಗೆ ಶಿಪ್ಟ್ ಮಾಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ.
ಬ್ಯಾರಕ್ ಮುಂಭಾಗದಲ್ಲಿ ದರ್ಶನ್ ಗೆ ಬೆಳಗ್ಗೆ ಮತ್ತು ಸಂಜೆ ವಾಕ್ ಮಾಡಲು ಜೈಲ್ ಅಧಿಕಾರಿಗಳು ವಾಕ್ ಮಾಡಲು ಅನುಮತಿ ನೀಡಿದ್ದಾರೆ.
ನ್ಯಾಯಧೀಶರ ಬಳಿ ನಿನ್ನೆ ಫಂಗಸ್ ಎಂದು ಹೇಳಿಕೆಯ ಕುರಿತು ನಿನ್ನೆ ರಾತ್ರಿ ಜೈಲಿನ ವೈದ್ಯರಿಂದ ತಪಾಸಣೆ ಮಾಡಲಾಯಿತು, ದರ್ಶನ್ ಭದ್ರತೆ, ವ್ಯವಸ್ಥೆ ಹಾಗೂ ಸೌಲಭ್ಯಗಳ ನಿಯೋಜನೆಯಲ್ಲಿ ಕೆಲ ಬದಲಾವಣೆಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.