ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ2 ಆರೋಪಿ ನಟ ದರ್ಶನ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಇಂದು (ಮಂಗಳವಾರ) ಕೋರ್ಟ್ ನಲ್ಲಿ ನಿರ್ಧಾರವಾಗಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 5 ಆರೋಪಿಗಳ ಸ್ಥಳಾಂತರಸುವಂತೆ ಜೈಲಾಧಿಕಾರಿಗಳಿಂದ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನಲೆ ಕೋರ್ಟ್ ವಾದ-ಪ್ರತಿವಾದ ಆಲಿಸಿ ಇವತ್ತಿಗೆ ಆದೇಶವನ್ನು ಕಾಯ್ದಿರಿಸಲಾಗಿತ್ತು.
ದರ್ಶನ್ ಸೇರಿ ಇತರೆ ಆರೋಪಿಗಳ ಸ್ಥಳಾಂತರ ಆದೇಶ, ಮತ್ತೊಂದು ದರ್ಶನ್ ಗೆ ಹೆಚ್ಚುವರಿ ದಿಂಬು, ಬೆಡ್ ಶೀಟ್ ಗಾಗಿ ಸಲ್ಲಿಸಿದ್ದ ಎರಡು ಅರ್ಜಿ ಗಳಿಗೆ ಸಂಬಂಧಪಟ್ಟಂತೆ ಸಿಸಿಎಚ್ 57ನೇ ಕೋರ್ಟ್ ಇಂದು ಆದೇಶ ನೀಡಲಿದೆ.
ಒಂದು ವೇಳೆ ಸ್ಥಳಾಂತರಕ್ಕೆ ಕೋರ್ಟ್ ಒಪ್ಪಿಗೆ ನೀಡಿದರೆ ನಟ ದರ್ಶನ್ ಅವರನ್ನು ಮತ್ತೆ ಬಳ್ಳಾರಿಗೆ ಸ್ಥಳಾಂತರಿಸಲಾಗುತ್ತದೆ. ಜಗದೀಶ್ ಮತ್ತು ಲಕ್ಷ್ಮಣ್ ಶಿವಮೊಗ್ಗ ಜೈಲಿಗೆ, ನಾಗರಾಜ್ ಕಲಬುರಗಿ ಜೈಲಿಗೆ ಪ್ರದೂಷ್ ಬೆಳಗಾವಿ ಜೈಲಿಗೆ, ಸ್ಥಳಾಂತರಿಸಲಾಗುವುದು ಹಾಗೂ ಪವಿತ್ರಾ ಗೌಡ ಮತ್ತು ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಲ್ಲೆ ಸೆರೆವಾಸ ಆಗಲಿದೆ.