ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ಎ2 ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಕೋರಿ ಸಲ್ಲಿಕೆಯಾದ ಅರ್ಜಿ ಮತ್ತು ಹೆಚ್ಚುವರಿ ಹಾಸಿಗೆ ದಿಂಬು ನೀಡುವ ಕುರಿತ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ.
ಇಂದು( ಮಂಗಳವಾರ, ಸೆ.09) ಬೆಂಗಳೂರಿನ 57 ಸಿಸಿಹೆಚ್ ಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಈ ವೇಳ ದರ್ಶನ್ ಅವರು ನ್ಯಾಯಧೀಶರ ಮುಂದೆ ಜೈಲಿನ ಕೆಟ್ಟ ಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ.
“ಜೈಲಿನ ಶಿಕ್ಷೆಯನ್ನು ಅನುಭವಿಸಲು ಆಗುತ್ತಿಲ್ಲ. ನನಗೆ ಸ್ವಲ್ಪ ವಿಷ ಕೊಡಿಸಿ ಎಂದು ದರ್ಶನ್ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ. ಕೋರ್ಟ್‌ನಿಂದಲೇ ವಿಷ ನೀಡಲು ಆದೇಶಿಸಿ ಎಂದು ಆರೋಪಿ ದರ್ಶನ್ ಅವಲತ್ತುಕೊಂಡಿದ್ದಾರೆ.
ನಾನು ಬಿಸಿಲು ನೋಡಿ ತುಂಬಾ ದಿನಗಳು ಕಳೆದಿದೆ. ನನ್ನ ಕೈ ಎಲ್ಲಾ ಫಂಗಸ್ ಬಂದಿದೆ. ಬೇರೆ ಯಾರಿಗೂ ಬೇಡ ನನಗೆ ಸ್ವ ಲ್ಪ ವಿಷ ಕೊಡಿ ಎಂದು ದರ್ಶನ್ ಹೇಳಿದ್ದಾರೆ.



















