ಚಿತ್ರದುರ್ಗ: ಚಿತ್ರದುರ್ಗದ ರೇಣುಕಾಸ್ವಾಮಿ ಅಂತ್ಯಕ್ರಿಯೆಯು ಮಂಗಳಾವರ ರಾತ್ರಿ ಕುಟುಂಬಸ್ಥರ ಆಕ್ರಂದನಗಳ ಮಧ್ಯೆ ನಡೆಯಿತು.
ಚಿತ್ರದುರ್ಗದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಸ್ಥಳದಲ್ಲಿ ಹೆತ್ತವರ, ಸಂಬಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ನಿನ್ನೆ ಕೊಲೆಯ ಆರೋಪಿಗಳು ಎನ್ನಲಾದ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ 13 ಜನರನ್ನು ಪೊಲೀಸರು ಬಂಧಿಸಿ, ಕೋರ್ಟ್ ಹಾಜರು ಪಡಿಸಿದ್ದರು. ಕೋರ್ಟ್ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಇನ್ನೊಂದೆಡೆ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ರೇಣುಕಾಸ್ವಾಮಿ ನಿವಾಸಕ್ಕೆ ಮೃತದೇಹ ಹಸ್ತಾಂತರಿಸಲಾಯಿತು. ಮೃತದೇಹ ವೀಕ್ಷಿಸುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು. ಲಕ್ಷ್ಮಿ ವೆಂಕಟೇಶ್ವರ ಬಡಾವಣೆಯಲ್ಲಿನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆನಂತರ ವೀರಶೈವ ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನ ನಡೆಸಲಾಯಿತು.
ಪತಿಯ ಮೃತದೇಹ ಕಂಡು ಪತ್ನಿ ಸಹನಾ ಗೋಳಾಡಿದರು. ತಂದೆ ಕಾಶಿನಾಥ್, ತಾಯಿ ರತ್ನಮ್ಮ ಅವರ ದುಃಖ ಮುಗಿಲು ಮುಟ್ಟಿತ್ತು. ಕೊಲೆ ಮಾಡಿದವರ ವಿರುದ್ಧ ಕುಟುಂಬಸ್ಥರು ಶಾಪ ಹಾಕಿದರು.