ಮುಂಬೈ : ಬಿ.ಆರ್.ಚೋಪ್ರಾ ಅವರ ಮಹಾಕಾವ್ಯ ‘ಮಹಾಭಾರತ’ದಲ್ಲಿ ಕರ್ಣನ ಅವಿಸ್ಮರಣೀಯ ಪಾತ್ರದ ಮೂಲಕ ಜನಮಾನಸಗೊಂಡಿದ್ದ ಹಿರಿಯ ನಟ ಪಂಕಜ್ ಧೀರ್ (68) ಇಂದು ನಿಧನರಾಗಿದ್ದಾರೆ.

ನಟ ಪಂಕಜ್ ಧೀರ್ ಈ ಮೊದಲು ಕ್ಯಾನ್ಸರ್‌ದಿಂದ ಬಳಲುತ್ತಿದ್ದರು. ಆ ನಂತರ ಚೇತರಿಸಿಕೊಂಡಿದ್ದರು. ಆದರೆ ಕೆಲ ದಿನಗಳ ಹಿಂದೆ ಅವರಿಗೆ ಕ್ಯಾನ್ಸರ್ ಮತ್ತೆ ಮರುಕಳಿಸಿತ್ತು. ಹೀಗಾಗಿ ಆರೋಗ್ಯ ಹದಗೆಟ್ಟಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.

ಪಂಕಜ್ ಧೀರ್ ಅವರ ನಿಧನಕ್ಕೆ ಸಿಂಟಾ (Cine & TV Artistes’ Association) ಸಂತಾಪ ಸೂಚಿಸಿದ್ದು “ನಮ್ಮ ಟ್ರಸ್ಟ್‌ನ ಮಾಜಿ ಅಧ್ಯಕ್ಷರು ಮತ್ತು ಸಿಂಟಾದ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್ ಧೀರ್ ಅವರು ನಿಧನರಾದರು ಎಂದು ತೀವ್ರ ದುಃಖದಿಂದ ತಿಳಿಸುತ್ತೇವೆ. ಅವರ ಅಂತ್ಯಕ್ರಿಯೆ ಇಂದು ಸಂಜೆ 4:30 ಕ್ಕೆ, ಪವನ್ ಹನ್ಸ್, ವಿಲೆ ಪಾರ್ಲೆ (ಪಶ್ಚಿಮ), ಮುಂಬೈ ಸಮೀಪ ನಡೆಯಲಿದೆ” ಎಂದು ಮಾಹಿತಿಯನ್ನು ಹಂಚಿಕೊಂಡಿದೆ.