ಮಲಯಾಂಳನ (Malyalam) ಖ್ಯಾತ ನಿರ್ದೇಶಕ ವೇಣುಗೋಪನ್ ಇಹಲೋಕ ತ್ಯಜಿಸಿರುವ ಘಟನೆ ನಡೆದಿದೆ.
ವೇಣುಗೋಪನ್ (Venugopan) ಹಲವು ಮಲಯಾಳಂ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಆದರೆ, ಇಂದು (ಜೂನ್ 21) ಬೆಳಗ್ಗೆ ನಿಧನರಾಗಿದ್ದಾರೆ. ಸಾವನ್ನಪ್ಪಿದ ಸುದ್ದಿ ಕೇಳಿ ಫ್ಯಾನ್ಸ್ ಗೆ ಆಘಾತವಾಗಿದೆ.
ಕೇರಳದ ಚೇರ್ತಲದಲ್ಲಿನ ತಮ್ಮ ನಿವಾಸದಲ್ಲಿ ವೇಣುಗೋಪನ್ ಸಾವನ್ನಪ್ಪಿದ್ದಾರೆ. ಆದರೆ, ಸಾವಿನ ಕಾರಣ ತಿಳಿದು ಬಂದಿಲ್ಲ. ಸದ್ಯ ಅವರ ಸಾವಿನ ಸುದ್ದಿಯನ್ನು ನಟ ಅನೂಪ್ ಮೆನನ್ ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. 67ನೇ ವಯಸ್ಸಿನ ವೇಣುಗೋಪನ್ ನಿಧನಕ್ಕೆ ಮಾಲಿವುಡ್ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ. ಮಲಯಾಳಂ ನಟ ಜಯರಾಮ್ ನಟನೆಯ ‘ಶಾರ್ಜಾ ಟು ಶಾರ್ಜಾ’ ಸಿನಿಮಾಗೆ ವೇಣು ನಿರ್ದೇಶನ ಮಾಡಿದ್ದರು.