ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮರುನಾಮಕರಣ ಅಭಿವೃದ್ಧಿ ಹೆಬ್ಬಾಗಿಲು ತೆರೆದಂತಾಗಿದೆ. ಬೆಂಗಳೂರು ಉತ್ತರ ಜಿಲ್ಲೆ ಇನ್ಮುಂದೆ ಹೊಸ ಬಗೆಯ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ ಅಂತಾ ಸಚಿವ ಎಂ.ಬಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದ ಎಂ.ಬಿ. ಪಾಟೀಲ್, ಮರುನಾಮಕರಗೊಂಡಿರುವ ಜಿಲ್ಲೆಗೆ ಭರಪೂರ ಕೊಡುಗೆ ಸಿಗಲಿದೆ ಎಂದಿದ್ದಾರೆ. ಮೆಟ್ರೋ ಜೊತೆ ಕೈಗಾರಿಕೆಗಳ ಕೊಡುಗೆಯೂ ಹರಿದು ಬರಲಿದೆ ಅಂತಾ ಎಂಬಿಪಿ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ದೇವನಹಳ್ಳಿ ರೈತರ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇಂದು ಸಂಜೆ ಮತ್ತು ನಾಳೆ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುತ್ತೆ ಎಂದಿದ್ದಾರೆ.