ನಿರ್ದೇಶಕ ರಮೇಶ್ ಇಂದಿರಾ ಅವರು ನೆನಪಿರಲಿ ಪ್ರೇಮ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಹೌದು! ಕನ್ನಡದ ಖ್ಯಾತ ನಿರ್ದೇಶಕ ಇದೀಗ ಖ್ಯಾತ ನಟ ಹಾಗೂ ಸ್ಪಾರ್ಕ್ ಚಿತ್ರ ತಂಡದ ವಿರುದ್ಧ ದೂರು ನೀಡಿದ್ದಾರೆ. ಚಿತ್ರ ತಂಡ ತನ್ನ ಅನುಮತಿ ಇಲ್ಲದೆ ಭೀಮ ಚಿತ್ರದಲ್ಲಿನ ತನ್ನ ಫೋಟೋವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ರಮೇಶ್ ಇಂದಿರಾ ಆರೋಪಿಸಿದ್ದಾರೆ. ಸ್ಪಾರ್ಕ್ ಚಿತ್ರತಂಡ ನೆನಪಿರಲಿ ಪ್ರೇಮ್ ಹುಟ್ಟು ಹಬ್ಬಕ್ಕೆ ಪೋಸ್ಟರ್ ಬಿಡುಗಡೆ ಮಾಡಿತ್ತು.
ಈ ಪೋಸ್ಟರಲ್ಲಿ ನೆನಪಿರಲಿ ಪ್ರೇಮ್ ಒಂದು ಪತ್ರಿಕೆಯನ್ನು ಸಿಗರೇಟ್ ನಲ್ಲಿ ಸುಡುವ ಚಿತ್ರವಿತ್ತು. ಈ ಪತ್ರಿಕೆಯಲ್ಲಿ ರಮೇಶ್ ಇಂದಿರಾ ಫೋಟೋ ಇತ್ತು. ಆದರೆ ಚಿತ್ರತಂಡ ರಮೇಶ್ ಇಂದಿರಾ ಅವರ ಅನುಮತಿಯನ್ನೇ ತೆಗೆದುಕೊಂಡಿಲ್ಲ. ಯಾರಿಗೂ ಹೇಳದೆ ಕೇಳದೆ ಫೋಟೋ ಬಳಸಿದ್ದರಿಂದ ಇದೀಗ ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿದೆ.