ಬೆಳಗಾವಿ: ಮೈದುನನ ಜೊತೆಗಿದ್ದ ಸಂಬಂಧ ಬಹಿರಂಗವಾಗುತ್ತಿದ್ದಂತೆ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ 28 ವರ್ಷದ ಆರತಿ, ಮೊರಬ ಗ್ರಾಮದ ಪ್ರಶಾಂತ್ ಕಾಂಬಾಳೆ ಎಂಬಾತನೊಂದಿಗೆ ಮದುವೆಯಾಗಿದ್ದರು. ಆದರೆ, ಪತಿಯ ಸಹೋದರನೊಂದಿಗೂ ಸಂಬಂದ ಹೊಂದಿದ್ದಳು ಎನ್ನಲಾಗಿದೆ. ಸದ್ಯ ಈ ವಿಷಯ ಬಹಿರಂಗವಾಗುತ್ತಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆರತಿ ಹಾಗೂ ಮೈದುನ ಸಾಗರ್ ಕಾಂಬಳೆ ಮಧ್ಯೆ ಕೆಲವು ದಿನಗಳಿಂದ ಸಂಬಂಧ ಇತ್ತು. ಆ ವೇಳೆ ಇಬ್ಬರು ಫೋಟೋ ಕೂಡ ತೆಗೆದುಕೊಂಡಿದ್ದರು. ಆದರೆ, ಇತ್ತೀಚೆಗೆ ಆರತಿ ಫೋಟೋ ಜೊತೆಗೆ ತನ್ನ ಫೋಟೋ ಸೇರಿಸಿ ಮೈದುನ ಎಡಿಟ್ ಮಾಡಿ ಸ್ಟೇಟಸ್ ಹಾಕಿದ್ದ. ಈ ವಿಷಯ ಆರತಿ ಪತಿಗೆ ಸೇರಿದೆ. ಆಗ ಮನೆಯಲ್ಲಿ ಜಗಳವಾಗಿದೆ. ಈ ವಿಷಯ ಎಲ್ಲರಿಗೂ ತಿಳಿಯುತ್ತಿದ್ದಂತೆ ಆರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.