ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿರುವ ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಗೆ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಏಪ್ರಿಲ್ 14ರಿಂದಲೇ ನೋಂದಣಿ ಆರಂಭವಾಗಿದೆ. 2025ರ ಅಮರನಾಥ ಯಾತ್ರೆ ಜೂನ್ 29 ರಿಂದ ಪ್ರಾರಂಭವಾಗಿ ಆಗಸ್ಟ್ 19 ರವೆರೆಗೆ ನಡೆಯಲಿದೆ ಸಮುದ್ರಮಟ್ಟದಿಂದ 12,756 ಅಡಿ ಎತ್ತರದ ಗುಹೆಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಶಿವಲಿಂಗದ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಅಮರನಾಥ ಯಾತ್ರೆ ಕೈಗೊಳ್ಳಲು ಬಯಸುವವರು ಶ್ರೀ ಅಮರನಾಥ ಜೀ ದೇವಾಲಯ ಮಂಡಳಿಯ (ಎಸ್ಎಎಸ್ ಬಿ) ಅಧಿಕೃತ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹಾಗೆಯೇ, ದೇಶಾದ್ಯಂತ ನಿಗದಿಪಡಿಸಿರುವ 540 ಬ್ಯಾಂಕ್ ಶಾಖೆಗಳ ಮೂಲಕ ಆಫ್ ಲೈನ್ ನಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.
13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಯಾತ್ರೆಗೆ ಅವಕಾಶವಿಲ್ಲ. ಒಂದು ತಿಂಗಳು ಯಾತ್ರೆ ನಡೆಯುವ ಕಾರಣ ಹೋಗುವಾಗ ಉಣ್ಣೆಯ ಬಟ್ಟೆಗಳು, ಜಲನಿರೋಧಕ ಬೂಟುಗಳು, ರೇನ್ ಕೋಟ್ ಗಳು ಮತ್ತು ಟಾರ್ಚ್ ಇದ್ದರೆ ಅನುಕೂಲ. ಹಾಗೆಯೇ, ಯಾತ್ರಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
- ಎಸ್ಎಸಿಬಿ ಪೋರ್ಟಲ್ ಆಗಿರುವ https://jksasb.nic.in ಗೆ ಭೇಟಿ ನೀಡಬೇಕು
- ಯಾತ್ರಾ 2025 ನೋಂದಣಿ ಮೇಲೆ ಕ್ಲಿಕ್ ಮಾಡಬೇಕು
- ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡುವುದು
- ಏಪ್ರಿಲ್ 15ರ ನಂತರದ ಆರೋಗ್ಯ ಪ್ರಮಾಣಪತ್ರ ಅಪ್ ಲೋಡ್ ಕಡ್ಡಾಯ
- ಪಾಸ್ ಪೋರ್ಟ್ ಸೈಜಿನ ಫೋಟೋ ಅಪ್ ಲೋಡ್ ಮಾಡುವುದು
- ಐಡಿ ಕಾರ್ಡ್ ದಾಖಲೆ ಒದಗಿಸಿ, ಪಾವತಿ ಮಾಡಿದರೆ ಪ್ರಕ್ರಿಯೆ ಪೂರ್ಣ



















