ಬೀದರ್ : ವೈದ್ಯರಿರಲಿ ಯಾರೇ ಇರಲಿ ಅವರು ದೇಶ ದ್ರೋಹಿಗಳೇ ಇಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನ ಸಭಾ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ.
ಬೀದರ್‌ನಲ್ಲಿ ಮಾಧ್ಯಮಗಾರರೊಂದಿಗೆ ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ ವಿಚಾರ ಸಂಬಂಧಪಟ್ಟಂತೆ ಮಾತನಾಡಿದ ಖಾದರ್ ಇಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇವರಿಗೆ ಯಾರು ಬೆಂಬಲ ನೀಡುತ್ತಾರೆ ಅವರ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂಥಹ ಕೃತ್ಯಗಳನ್ನು ಯಾರಿಂದಲೂ ಸಹಿಸಲು ಸಾದ್ಯವಿಲ್ಲ. ದೇಶದ್ರೋಹಿಗಳಿಗೆ ಯಾವುದೇ ಧರ್ಮ, ಜಾತಿ ಇರುವುದಿಲ್ಲ ಎಂದಿದ್ದಾರೆ.
ಕಲಿತವರಿಂದಲ್ಲೇ ಸಮಸ್ಯೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನ ಬುಡಸಮೇತ ಕಿತ್ತುಹಾಕುವ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಬೇಕು. ಇಬ್ಬರು ಜೊತೆ ಸೇರಿ ಒಗ್ಗಟ್ಟಿನಿಂದ ನಿಬಾಯಿಸಬೇಕು. ಅಲ್ಲದೇ ಜನಸಾಮಾನ್ಯರು ಕೂಡಾ ಸಂಪೂರ್ಣ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
ಯಾರೇ ಬಂದ್ರು ಅವರಿಗೆ ಮನೆ ನೀಡಲು ಹತ್ತು ಸಾರಿ ಯೋಚನೆ ಮಾಡಬೇಕು. ಇಂದು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಅನಿವಾರ್ಯ ಇದೆ ವಿಧಾನಸೌಧಕ್ಕೆ ಹೆಚ್ಚಿನ ಭದ್ರತೆ ನೀಡುತ್ತೇವೆ ಎಂದು ಯುಟಿ ಖಾದರ್
ಇದನ್ನೂ ಓದಿ : ಇನ್ನೂ ಸಮತೋಲನ ಕಲಿಯುತ್ತಿದ್ದೇನೆ”: ಮೂರೂ ಮಾದರಿಯ ಕ್ರಿಕೆಟ್‌ನ ಸವಾಲುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಶುಭಮನ್ ಗಿಲ್!



















