ಬೆಳಗಾವಿ: ರೀಲ್ಸ್ ಜಗಳ ಪೈಲ್ವಾನ್ ನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಜ.15ರಂದು ಜಿಲ್ಲೆಯ ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಹೊರ ವಲಯದಲ್ಲಿ ಈ ಘಟನೆ ನಡೆದಿದೆ. ಪ್ರಕಾಶ್ ಇರಟ್ಟಿ(26) ಕೊಲೆಯಾಗಿರುವ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದವರು ಸೇರಿದಂತೆ ಒಟ್ಟು 8 ಜನರನ್ನು ಪೊಲೀಸರು(police) ವಶಕ್ಕೆ ಪಡೆದಿದ್ದಾರೆ. ರವಿಚಂದ್ರ ಪಾತ್ರೋಟ್, ಉಮೇಶ್ ಕಂಬಾರ್, ಮಾರುತಿ ವಡ್ಡರ್, ಅಭಿಷೇಕ್ ಪಾತ್ರೋಟ್, ಮನೋಜ್ ಪಾತ್ರೋಟ್, ವಿಜಯ್ ಕುಮಾರ್ ನಾಯಿಕ್ ಸೇರಿದಂತೆ 8 ಜನರನ್ನು ವಶಕ್ಕೆ ಪಡೆಯಲಾಗಿದೆ.
ಕೊಳವಿ ಜಾತ್ರೆಯಲ್ಲಿ ಕೊಲೆಯಾಗಿರುವ ಪ್ರಕಾಶ್ ಇರಟ್ಟಿ(Prakash Iratti) ಮತ್ತು ರವಿಚಂದ್ರ ಪಾತ್ರೋಟ್ (Ravichandra Pathrot) ಮಧ್ಯೆ ಗಲಾಟೆ ನಡೆದಿದೆ. ಗಲಾಟೆಯ ನಂತರ ಎರಡು ರೀಲ್ಸ್ ಹಾಕಿದ್ದ ಕೊಲೆಯಾಗಿರುವ ಪ್ರಕಾಶ್ ವಿರುದ್ಧ ರವಿಚಂದ್ರ ಸಿಟ್ಟಾಗಿದ್ದ. ಜ. 15ರಂದು ಹೂಲಿಕಟ್ಟಿ ಗ್ರಾಮದ ಶಿವಲಿಂಗೇಶ್ವರ ಜಾತ್ರೆಗೆ(Shivalingeshwar fair) ಪ್ರಕಾಶ್ ಹೋಗುವುದನ್ನೇ ಕಾದು ಕುಳಿತಿದ್ದ ಆರೋಪಿಗಳು, ಬೈಕ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಕುರಿತು ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.