ಬೆಂಗಳೂರು: ನಮ್ಮ ಮೆಟ್ರೋದಲ್ಲಿ (namma Metro) ಕನ್ನಡೇತರರಿಗೆ ಅವಕಾಶ ಸಿಗದಂತೆ ನೇಮಕಾತಿ ಹೊರಡಿಸಲಾಗಿದೆ ಎಂಬ ಸುದ್ದಿಯನ್ನು ಕರ್ನಾಟಕ ನ್ಯೂಸ್ ಬೀಟ್ ಪ್ರಸಾರ ಮಾಡಿತ್ತು. ಈಗ ಈ ವರದಿಗೆ ಸ್ಪಂದಿಸಿರುವ ಬಿಎಂಆರ್ ಸಿಎಲ್ ತನ್ನ ತಪ್ಪು ತಿದ್ದಿಕೊಂಡಿದೆ.
ಗುತ್ತಿಗೆ ಆಧಾರದ ಮೇಲೆ 50 ಟ್ರೈನ್ ಆಪರೇಟರ್ ಹುದ್ದೆಗಳ ನೇಮಕಾತಿಗೆ ಮೆಟ್ರೋ ಮುಂದಾಗಿತ್ತು. ಹೀಗಾಗಿ BMRCL ಕಚೇರಿ ಮುಂದೆ ಕನ್ನಡಪರ ಹೋರಾಟಗಾರರು ಧರಣಿ ನಡೆಸಿದ್ದರು. ಹೀಗಾಗಿ ಎಚ್ಚೆತ್ತುಕೊಂಡಿರುವ ಬಿಎಂಆರ್ ಸಿಎಲ್ ಅಧಿಸೂಚನೆ ಹಿಂಪಡೆದಿದೆ.
ಬಿಎಂಆರ್ ಸಿಎಲ್ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರರಾವ್ ಕಚೇರಿಯತ್ತ ಹೋದ ಕನ್ನಡ ಪರ ಹೋರಾಟಗಾರರನ್ನ ಕಂಡು, ಮೆಟ್ರೋ ಎಂಡಿ ತನ್ನ ಕಚೇರಿಯಿಂದ ಹೊರ ಬಂದು ಮಾತುಕತೆಗೆ ಮುಂದಾಗಿದ್ದರು. ಈ ವೇಳೆ ಮಾತಿಗಿಳಿದ ಕನ್ನಡಪರ ಹೋರಾಟಗಾರರು, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ಕನ್ನಡಿಗರಿಗೆ ಅನ್ಯಾಯವಾದರೆ ಮೆಟ್ರೋ ಸ್ಟೇಷನ್ಗೆ ನುಗ್ಗುತ್ತೇವೆಂದು ಎಚ್ಚರಿಕೆ ನೀಡದರು. ಈಗ ಬಿಎಂಆರ್ ಸಿಎಲ್ ತನ್ನ ತಪ್ಪು ತಿದ್ದಿಕೊಂಡಿದೆ.