ಬೆಂಗಳೂರು: ಯಾದಗಿರಿ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 21 ಇನ್ಸೆಕ್ಟ್ ಕಲೆಕ್ಟರ್ ಮತ್ತು ವಾಲಂಟೀರ್ಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಒಬ್ಬ ಇನ್ಸೆಟ್ ಕಲೆಕ್ಟರ್ ನನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ನೇಮಕಾತಿ ಹೊಂದಿದವರಿಗೆ ಮಾಸಿಕ 15,114 ರೂಪಾಯಿ ವೇತನ ನೀಡಲಾಗುತ್ತದೆ. ಇನ್ನು, 20 ವಾಲಂಟೀರ್ಸ್ ಹುದ್ದೆಗಳನ್ನೂ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ವಾಲಂಟೀರ್ಸ್ ಹುದ್ದೆಗೆ ನೇಮಕಾತಿ ಹೊಂದಿದವರಿಗೆ ಪ್ರತಿ ದಿನ 400 ರೂಪಾಯಿ ಭತ್ಯೆ ನೀಡಲಾಗುತ್ತದೆ.
ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಇನ್ಸೆಕ್ಟ್ ಕಲೆಕ್ಟರ್ ಹುದ್ದೆಗೆ ಜೂನ್ 9ರಂದು, ವಾಲಂಟೀರ್ಸ್ ಹುದ್ದೆಗಳಿಗೆ ಜೂನ್ 4ರಂದು ಸಂದರ್ಶನ ನಡೆಸಲಾಗುತ್ತದೆ.
ಸಂದರ್ಶನ ನಡೆಯುವ ಸ್ಥಳ : District Health and Family Welfare Officers’ Hall, Yadgir, Karnataka. ಬೆಳಗ್ಗೆ10 ರಿಂದ ಸಂಜೆ 5ರವರೆಗೆ ಸಂದರ್ಶನ ನಡೆಯಲಿದೆ. ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಾಸಾಗಿರಬೇಕು. ಗರಿಷ್ಠ 40 ವರ್ಷಗಳ ವಯೋಮಿತಿ ಇದೆ.