ಬೆಂಗಳೂರು: ಗುಮಟ್ಟ ನಗರಿ ವಿಜಯಪುರದಲ್ಲಿರುವ ಕೇಂದ್ರ ಸರ್ಕಾರದ ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿಗೆ ನೇರ ಸಂದರ್ಶನ ನಡೆಯಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 26 ಜುಲೈ 25 ರಂದು ಸಂದರ್ಶನಕ್ಕೆ ಹಾಜರಾಗುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ಕೇಂದ್ರೀಯ ವಿದ್ಯಾಲಯದಲ್ಲಿ ಖಾಲಿ ಇರುವ ಪ್ರಾಥಮಿಕ ಶಿಕ್ಷಕರು, ಡೇಟಾ ಎಂಟ್ರಿ ಅಪೇರೇಟರ್, ಸೇರಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಗುತ್ತಿಗೆಯ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ವಿಜ್ಞಾನ, ಸಂಸ್ಕೃತ, ಶ್ರವಣ ಶಿಕ್ಷಕ, ಕ್ರೀಡಾ ವಿಭಾಗದ ಶಿಕ್ಷಕ ಹಾಗೂ ಸಹಾಯಕ ಹುದ್ದೆಗಳು ಖಾಲಿ ಇವೆ.
ಬಿ.ಎಡ್, ಸಿಟಿಇಟಿ, ಡಿಪ್ಲೋಮಾ, ಎಂಸಿಎ, ಎಂಎಸ್ಸಿ ಸೇರಿ ಹಲವು ಕೋರ್ಸ್ ಗಳನ್ನು ಮುಗಿಸಿದವರು ಸಂದರ್ಶನಕ್ಕೆ ಹಾಜರಾಗಬಹುದು. ಯೋಗ ಶಿಕ್ಷಕರ ಹುದ್ದೆಗಳಿಗೆ ಯಾವುದೇ ಪದವಿ ಮತ್ತು ಕನಿಷ್ಠ 1 ವರ್ಷ ಯೋಗ ತರಬೇತಿ ನೀಡಿದ ಅನುಭವ ಇರಬೇಕು. ಇನ್ನು, ವೊಕೆಷನಲ್ ಟೀಚರ್ ಹುದ್ದೆಗೆ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ನಲ್ಲಿ ಬಿಇ, ಬಿಟೆಕ್, ಎಂಟೆಕ್ ಓದಿಕೊಂಡಿರಬೇಕು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ https://vijayapura.kvs.ac.in, (https://vijayapura.kvs.ac.inಗೆ ಭೇಟಿ ನೀಡಬೇಕು. ನೇರ ಸಂದರ್ಶನಕ್ಕೆ ಹಾಜರಾಗುವವರು ಅಗತ್ಯ ದಾಖಲೆಗಳನ್ನು ತರಬೇಕು. ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನ ಸಮಯ: ಬೆಳಗ್ಗೆ 8ರಿಂದ 10ರವರೆಗೆ ನಡೆಯುತ್ತದೆ. 10ರಿಂದ ಸಂದರ್ಶನ ಆರಂಭವಾಗುತ್ತದೆ.
ಸಂದರ್ಶನ ನಡೆಯುವ ವಿಳಾಸ
ದಿನಾಂಕ: ಜುಲೈ 26
PM SHRI Kendriya Vidyalaya, Afzalpur Takke,
Torvi Road, Vijayapura – 586102



















