ಹುಬ್ಬಳ್ಳಿ: ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ (ಕೆಎಲ್ಇ ಸೊಸೈಟಿ) ತಾಂತ್ರಿಕ ವಿಶ್ವವಿದ್ಯಾಲಯದ ಹುಬ್ಬಳ್ಳಿ ಕ್ಯಾಂಪಸ್ ನಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ (KLE Technological University Recruitment 2025) ಅರ್ಜಿ ಆಹ್ವಾನಿಸಲಾಗಿದೆ. ಇಸಿಇ ಹಾಗೂ ಸಿಎಸ್ಇ ವಿಭಾಗಗಳಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದಾಗಿದೆ.
ಎಂ ಇ ಅಥವಾ ಎಂಟೆಕ್ ಕೋರ್ಸ್ ಗಳನ್ನು ಪ್ರಥಮ ದರ್ಜೆಯಲ್ಲಿ ಪಾಸ್ ಮಾಡಿರಬೇಕು. ಪಿ ಎಚ್. ಡಿ ಪಡೆದವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ. ಎಐಸಿಟಿಇ ನಿಯಮಗಳ ಪ್ರಕಾರ ಕಾರ್ಯಾನುಭವ ಪಡೆದಿರಬೇಕು. ಹಾಗೆಯೇ, ವಿ ಎಲ್ ಎಸ್ ಐ, ಎಂಬೆಡೆಡ್ ಸಿಸ್ಟಮ್ಸ್, ಎಲೆಕ್ಟ್ರಿಕ್ ಡ್ರೈವ್ಸ್, ಕಮ್ಯುನಿಕೇಷನ್ ಮತ್ತು ನೆಟ್ ವರ್ಕಿಂಗ್, ಕಂಪ್ಯೂಟರ್ ವಿಷನ್, ಡಾಟಾ ಸೈನ್ಸ್, ಸೈಬರ್ ಸೆಕ್ಯುರಿಟಿ ಮತ್ತು ವೈರ್ ಲೆಸ್ ನೆಟ್ ವರ್ಕ್ ವಿಷಯಗಳಲ್ಲಿ ಶಿಕ್ಷಣ ಪಡೆದಿರಬೇಕು.
ನೇಮಕಾತಿ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ, ಸೇವಾ ಅನುಭವ ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಇದಾದ ಬಳಿಕ ಸಂದರ್ಶನ ನಡೆಸಿ, ಅದರ ಪ್ರದರ್ಶನದ ಆಧಾರದ ಮೇಲೆ ನೇಮಕಾತಿ ಆದೇಶ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಅರ್ಜಿ ಹೀಗೆ ಸಲ್ಲಿಸಿ
ಆಸಕ್ತಿ ಇರುವ ಅಭ್ಯರ್ಥಿಗಳು ಇತ್ತೀಚಿನ ಅಪ್ಡೇಟ್ ಮಾಡಲಾದ ಬಯೋಡೇಟಾವನ್ನು ಹಾಗೂ ಹುದ್ದೆಗೆ ನಿಗದಿತ ಶೈಕ್ಷಣಿ ಅರ್ಹತೆಗಳು, ತಜ್ಞತೆ, ಕಾರ್ಯಾನುಭವದ ದಾಖಲೆಗಳನ್ನು ಸ್ಕ್ಯಾನ್ ಮಾಡಿ, careers@kletech.ac.in ವಿಳಾಸಕ್ಕೆ ಕಳುಹಿಸಬಹುದಾಗಿದೆ. ಏಪ್ರಿಲ್ 23 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.