ಬೆಂಗಳೂರು: ಕೇಂದ್ರ ಸರ್ಕಾರದ ಉದ್ಯೋಗ ಪಡೆದು, ಜೀವನದಲ್ಲಿ ನೆಮ್ಮದಿಯಿಂದ ಇರಬೇಕು ಎಂದು ಬಯಸುವವರಿಗೆ ರೈಲ್ವೆ ಇಲಾಖೆಯು ಗುಡ್ ನ್ಯೂಸ್ ನೀಡಿದೆ. ರೈಲ್ವೆ ನೇಮಕಾತಿ ಮಂಡಳಿಯು 434 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 08 ಕೊನೆಯ ದಿನವಾಗಿದೆ.
ನರ್ಸಿಂಗ್ ಸೂಪರಿಂಟೆಂಡೆಂಟ್, ಡಯಾಲಿಸಿಸ್ ಟೆಕ್ನಿಶಿಯನ್, ಆರೋಗ್ಯ ಮತ್ತು ಮಲೇರಿಯಾ ನಿರೀಕ್ಷಕರು, ಫಾರ್ಮಾಸಿಸ್ಟ್, ರೇಡಿಯೋಗ್ರಾಫರ್ ಮತ್ತು ಪ್ರಯೋಗಾಲಯ ಸಹಾಯಕ ಸೇರಿ ಹಲವು ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಬಿಎಸ್ಸಿ, ಡಿಪ್ಲೋಮಾ, ಡಿಗ್ರಿ ಓದಿದವರು ಅರ್ಜಿ ಸಲ್ಲಿಸಲು ಅರ್ಹರು. ಆಗಸ್ಟ್ 9ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ ಹೆಸರು : ರೈಲ್ವೆ ನೇಮಕಾತಿ ಮಂಡಳಿ ( RRB )
ಒಟ್ಟು ಹುದ್ದೆಗಳ ಸಂಖ್ಯೆ: 434
ಉದ್ಯೋಗ ಸ್ಥಳ: ದೇಶಾದ್ಯಂತ
ಹುದ್ದೆ ಹೆಸರು: ಫಾರ್ಮಾಸಿಸ್ಟ್, ನರ್ಸಿಂಗ್ ಸೂಪರಿಂಟೆಂಡೆಂಟ್
ಯಾವ ಹುದ್ದೆ ಎಷ್ಟು ಖಾಲಿ?
ನರ್ಸಿಂಗ್ ಸೂಪರಿಂಟೆಂಡೆಂಟ್ : 272
ಡಯಾಲಿಸಿಸ್ ಟೆಕ್ನಿಶಿಯನ್: 4
ಆರೋಗ್ಯ ಮತ್ತು ಮಲೇರಿಯಾ ನಿರೀಕ್ಷಕರು : 33
ಫಾರ್ಮಾಸಿಸ್ಟ್: 105
ರೇಡಿಯೋಗ್ರಾಫರ್ : 4
ಇಸಿಜಿ ತಂತ್ರಜ್ಞ : 4
ಲ್ಯಾಬ್ ಅಸಿಸ್ಟಂಟ್: 12
ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ನೇಮಕಾತಿ ಹೊಂದಿದವರಿಗೆ ಮಾಸಿಕ 44,900 ರೂಪಾಯಿ ವೇತನ ನೀಡಲಾಗುತ್ತದೆ. ಡಯಾಲಿಸಿಸ್ ಟೆಕ್ನಿಶಿಯನ್ ಗೆ 35,400 ರೂ. ವೇತನ ನಿಗದಿಪಡಿಸಲಾಗಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ವೇತನ ನೀಡಲಾಗುತ್ತದೆ. ಇನ್ನು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು indianrailways.gov.in ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.