ಬೆಂಗಳೂರು: ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡಬೇಕು, ಕೇಂದ್ರ ಸರ್ಕಾರಿ ಹುದ್ದೆಗಳನ್ನು ಪಡೆಯಬೇಕು ಎಂದು ಬಯಸುತ್ತಿರುವವರಿಗೆ ಒಳ್ಳೆಯ ಅವಕಾಶದ ಬಾಗಿಲು ತೆರೆದಿದೆ. ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಎಸ್ ಎಸ್ ಸಿ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ (Indian Navy SSC Officers Recruitment 2025) ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 260 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 1 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹುದ್ದೆಗಳ ಕುರಿತು ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಭಾರತೀಯ ನೌಕಾಪಡೆ
ಒಟ್ಟು ಹುದ್ದೆಗಳು: 260
ಹುದ್ದೆಗಳ ಹೆಸರು: ಎಸ್ ಎಸ್ ಸಿ ಆಫೀಸರ್
ಅರ್ಜಿ ಸಲ್ಲಿಕೆ ಮಾದರಿ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆಪ್ಟೆಂಬರ್ 01
ಉದ್ಯೋಗ ಸ್ಥಳ: ದೇಶಾದ್ಯಂತ
ಎಕ್ಸಿಕ್ಯೂಟಿವ್, ಟೆಕ್ನಿಕಲ್ ಹಾಗೂ ಎಜುಕೇಷನ್ ಬ್ರ್ಯಾಂಚ್ ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಬಿ.ಇ, ಬಿ.ಟೆಕ್ ಕೋರ್ಸ್ ಗಳನ್ನು ಶೇ.60ರಷ್ಟು ಅಂಕಗಳೊಂದಿಗೆ ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಎಲ್ ಎಲ್ ಬಿ, ಎಂಎಸ್ಸಿ, ಎಂಸಿಎ ಕೋರ್ಸ್ ಗಳನ್ನು ಮುಗಿಸಿದವರಿಗೂ ಅವಕಾಶಗಳಿವೆ. ನೇಮಕಾತಿ ಹೊಂದಿದವರಿಗೆ ಪೇ ಲೆವೆಲ್ 10ರ ಪ್ರಕಾರ ಮಾಸಿಕ 1.10 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಆಸಕ್ತರು https://www.joinindiannavy.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ಎಕ್ಸಿಕ್ಯೂಟಿವ್ ಬ್ರ್ಯಾಂಚ್
ಜನರಲ್ ಸರ್ವಿಸ್- 57
ಪೈಲಟ್ 24
ನೇವಲ್ ಏರ್ ಆಪರೇಷನ್ಸ್ ಆಫೀಸರ್- 20
ಏರ್ ಟ್ರಾಫಿಕ್ ಕಂಟ್ರೋಲರ್- 20
ಲಾಜಿಸ್ಟಿಕ್ಸ್- 10
ನೇವಲ್ ಆರ್ಮನೆಂಟ್ ಇನ್ ಸ್ಪೆಕ್ಟೊರೇಟ್ ಕೇಡರ್- 20
ಲಾ- 02
ಎಜುಕೇಷನ್ ಬ್ರ್ಯಾಂಚ್- 15
ಟೆಕ್ನಿಕಲ್ ಬ್ರ್ಯಾಂಚ್- 92



















