ಏರ್ ಇಂಡಿಯಾ ವತಿಯಿಂದ ಏರ್ ಪೋರ್ಟ್ ಲೋಡರ್ ಗಳ ಹುದ್ದೆಗೆ ನಡೆದಿದ್ದ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿರುವ ಘಟನೆ ನಡೆದಿದೆ.
2,216 ಹುದ್ದೆಗಳಿಗೆ ಬರೋಬ್ಬರಿ 25 ಸಾವಿರ ಆಕಾಂಕ್ಷಿಗಳು ಆಗಮಿಸಿದ್ದರಿಂದಾಗಿ ಕಾಲ್ತುಳಿತ ಉಂಟಾಗಿದೆ. ಘಟನೆಯ ವಿಡಿಯೊ ವೈರಲ್ ಆಗಿದ್ದು, ಈ ವಿಡಿಯೊದಲ್ಲಿ ಅಭ್ಯರ್ಥಿಗಳು ಅರ್ಜಿ ವಿತರಣಾ ಕೌಂಟರ್ ನ್ನು ತಲುಪಲು ಪರಸ್ಪರ ತಳ್ಳಾಡುವುದನ್ನು ಕಾಣಬಹುದು.
ಅರ್ಜಿ ಪಡೆಯಲು ಅಭ್ಯರ್ಥಿಗಳು ಗಂಟೆಗಟ್ಟಲೆ ಊಟ, ನೀರು ಇಲ್ಲದೆ ಕಾದಿದ್ದು, ಕೆಲವರು ಈ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದಾರೆ.. ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಆಗಾಗ ಆರೋಪಿಸುತ್ತಲೇ ಇದೆ, ಪ್ರಸ್ತುತ ನಡೆಯುತ್ತಿರುವ ಘಟನೆಗಳು ಇದಕ್ಕೆಲ್ಲಾ ಪುಷ್ಟಿ ನೀಡುವಂತಿದೆ.
ಏರ್ ಪೋರ್ಟ್ ಲೋಡರ್ ಗಳೆಂದರೆ ವಿಮಾನದಲ್ಲಿ ಸಾಮಾನುಗಳನ್ನು ಲೋಡ್ ಮಾಡುವುದು ಮತ್ತು ಇಳಿಸುವುದು. ಬ್ಯಾಗೇಜ್ ಬೆಲ್ಟ್ಗಳು ಮತ್ತು ರಾಂಪ್ ಟ್ರಾಕ್ಟರ್ ಗಳನ್ನು ನಿರ್ವಹಿಸುವುದು. ಪ್ರತಿ ವಿಮಾನಕ್ಕೆ ಸಾಮಾನು, ಸರಕು ಮತ್ತು ಆಹಾರ ಸರಬರಾಜುಗಳನ್ನು ನಿರ್ವಹಿಸಲು ಕನಿಷ್ಠ ಐದು ಲೋಡರ್ಗಳ ಅಗತ್ಯವಿದೆ. ಈ ಕೆಲಸಕ್ಕೆ ತಿಂಗಳಿಗೆ 20 ಸಾವಿರ ರೂ.ನಿಂದ 25 ಸಾವಿರ ರೂ. ಸಂಬಳ ಸಿಗುತ್ತದೆ. ಓವರ್ ಟೈಮ್ ಮಾಡಿದರೆ ತಿಂಗಳಿಗೆ 30 ಸಾವಿರ ರೂ. ವರೆಗೆ ಸಂಬಳ ಸಿಗುತ್ತದೆ. ಉದ್ಯೋಗಕ್ಕಾಗಿ ಶೈಕ್ಷಣಿಕ ಮಾನದಂಡಗಳು ಮೂಲಭೂತವಾಗಿವೆ, ಆದರೆ ಅಭ್ಯರ್ಥಿಯು ದೈಹಿಕವಾಗಿ ಬಲವಾಗಿರಬೇಕು.
