ಬೆಳಗಾವಿ: ಬಿಜೆಪಿ ರೆಬೆಲ್ಸ್ ಟೀಂ ಮತ್ತೆ ಆಕ್ಟಿವ್ ಆಗಿದೆ. ಇಂದು ರೆಬೆಲ್ಸ್ ತಂಡ ಮತ್ತೆ ಒಂದಾಗಿದೆ.
ಬಿಜೆಪಿ ರೆಬಲ್ಸ್ ಟೀಂ, ಗೋಕಾಕ್ ಮಹಾಲಕ್ಷ್ಮಿ ದೇವಿ ದರ್ಶನ ಪಡೆದಿದೆ. ಈ ವೇಳೆ ಶಾಸಕ ರಮೇಶ ಜಾರಕಿಹೊಳಿ ಸ್ನೇಹಿತರನ್ನು ದೇವಿ ದರ್ಶನ ಮಾಡಿಸಿದ್ದಾರೆ. ಗೋಕಾಕ್ ನಲ್ಲಿ ಲಕ್ಷ್ಮೀದೇವಿಯ ಜಾತ್ರೆ ಬರೋಬ್ಬರಿ 10 ವರ್ಷಗಳ ಬಳಿಕ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ.
ಈ ವೇಳೆ ಮಾಜಿ ಸಚಿವ ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ, ಮಹೇಶ ಕಮಟಹಳ್ಳಿ, ಶ್ರೀಮಂತ ಪಾಟೀಲ್, ಬಿ.ವಿ. ನಾಯಕ್ ಸಾಥ್ ನೀಡಿದರು. ಈ ವೇಳೆ ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿದರು.



















