ತುಮಕೂರು: ಈ ಜಿಲ್ಲೆಯ ಮಗನಾಗಿ ಯೋಜನೆಯನ್ನು ಬೇರೆ ಕಡೆ ತೆಗೆದುಕೊಂಡು ಹೋಗಲು ನಾನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕ ರಂಗನಾಥ್ ಭರವಸೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕುಣಿಗಲ್ ಗೆ ಮಾತ್ರ ಸೀಮಿತವಾದ ಯೋಜನೆ. ಈ ಜಿಲ್ಲೆಯ ಮಗನಾಗಿ ಯೋಜನೆಯನ್ನು ಬೇರೆ ಕಡೆ ತೆಗೆದುಕೊಂಡು ಹೋಗಲು ನಾನು ಬಿಡುವುದಿಲ್ಲ. ಯೋಜನೆಯನ್ನು ರಾಮನಗರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆಂಬುವುದು ಶುದ್ಧ ಸುಳ್ಳು. ರೈತರ ಹಿತಾಸಕ್ತಿಗೆ ನಾನು ನನ್ನ ಪ್ರಾಣ ಕೊಡಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.