ಬೆಂಗಳೂರು: ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ (RCB) ಭರ್ಜರಿ ಗೆಲುವು ಸಾಧಿಸಿದೆ. ವಿಕ್ಟರಿ ಪರೇಡ್ ಕೂಡ ನಡೆಸುತ್ತಿದೆ. ಇನ್ನೊಂದೆಡೆ ಗೆಲುವಿನ ನಶೆಯೊಂದಿಗೆ, ಮದ್ಯದ ನಶೆಯಲ್ಲಿಯೂ ಅಭಿಮಾನಿಗಳು ತೇಲಾಡಿದ್ದಾರೆ.
ಆರ್ ಸಿಬಿ ಹಾಗೂ ಪಂಜಾಬ್ ನಡುವೆ ನಡೆಯುತ್ತಿರುವ ಪಂದ್ಯದ ದಿನ 1.48 ಲಕ್ಷ ಬಾಟಲ್ ಬಿಯರ್ ಬಾಕ್ಸ್ಗಳು ಮಾರಾಟವಾಗಿದ್ದು, 30.66 ಕೋಟಿ ರೂ. ವಹಿವಾಟು ನಡೆದಿದೆ. ಕಳೆದ ವರ್ಷ ಇದೇ ದಿನಾಂಕದಂದು ಕೇವಲ 0.36 ಲಕ್ಷ ಬಾಕ್ಸ್ಗಳು ಮಾರಾಟವಾಗಿ, 6.29 ಕೋಟಿ ರೂ. ಆದಾಯ ಹರಿದು ಬಂದಿತ್ತು.
127.88 ಕೋಟಿ ರೂ. ಮೌಲ್ಯದ 1.28 ಲಕ್ಷ ಬಾಕ್ಸ್ಗಳು ಮಾರಾಟವಾಗಿವೆ. ಕಳೆದ ವರ್ಷ ಇದೇ ದಿನ ಮದ್ಯ ಮಾರಾಟದಿಂದ ಕೇವಲ 19.41 ಕೋಟಿ ರೂ.ಬಂದಿತ್ತು. ಮಂಗಳವಾರ ಒಂದು ದಿನದಲ್ಲಿ ರಾಜ್ಯವು ಮದ್ಯ ಮಾರಾಟದಿಂದ 157.94 ಕೋಟಿ ರೂ. ಗಳಿಸಿದೆ. ಹಿಂದಿನ ವರ್ಷದ ಜೂನ್ 3 ರಂದು ಒಟ್ಟು 25 ಕೋಟಿ ರೂ. ಗಳಿಸಿತ್ತು. ಆದರೆ, ಈ ಬಾರಿ ಬರೋಬ್ಬರಿ 132.24 ಕೋಟಿ ರೂ.ಗಳ ಹೆಚ್ಚಳವಾಗಿದೆ.