ಬೆಂಗಳೂರು: ಇಂದು ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ನಡೆಯುತ್ತಿದ್ದು, ಆರ್ಸಿಬಿ ಗೆಲುವಿಗಾಗಿ ಕನ್ನಡಿಗರು ಪ್ರಾರ್ಥನೆ ಮಾಡುತ್ತಿದ್ದಾರೆ. ಅಂತೆಯೇ ಮೂರುವರೆ ವರ್ಷದ ಪುಟ್ಟ ಅಭಿಮಾನಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿಶೇಷ ಹಾರೈಕೆ ನೀಡಿದ್ದಾನೆ

ಆರ್ಸಿಬಿ ಜರ್ಸಿ ಧರಿಸಿ ಬಾಲಿಂಗ್ ಮತ್ತು ಬ್ಯಾಟಿಂಗ್ ಮಾಡುವ ಮೂಲಕ ಸಣ್ಣ ಕಪ್ ಹಿಡಿದು ಫೋಟೋ ಶೂಟ್ ಮಾಡಿಸುವ ಮೂಲಕ ಮೂರುವರೆ ವರ್ಷದ ಲಿಶಾನ್ ಡಿ ಜೈನ್ ಆರ್ಸಿಬಿ ತಂಡಕ್ಕೆ ಶುಭಾಶಯ ಕೋರಿದ್ದಾನೆ.

ಪುಟ್ಟ ಫ್ಯಾನ್ ತಮ್ಮ ಸರಳ ಪ್ರಾರ್ಥನೆಯ ಮೂಲಕ “ಐಪಿಎಲ್ನಲ್ಲಿ ಆರ್ಸಿಬಿ ಕಿಂಗ್ ಆಗಲಿ” ಎಂಬ ಭಾವನೆ ವ್ಯಕ್ತಪಡಿಸಿದ್ದು, ಅಭಿಮಾನಿಗಳ ಹೃದಯದಲ್ಲಿ ಉತ್ಸಾಹ ಜೋರುಮಾಡಿದೆ. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅಭಿಮಾನಿಗಳಿಗಿಂತಲೂ ಪುಟ್ಟ ಮಕ್ಕಳ ಪ್ರೀತಿ ಮತ್ತು ಬೆಂಬಲವನ್ನೂ ಮೆಚ್ಚುಗೆಯಾಗಿ ತೆಗೆದುಕೊಂಡಿದೆ.
ಇದನ್ನೂ ಓದಿ : ಚಿನ್ನಸ್ವಾಮಿಯಲ್ಲಿಂದು ಹೈವೋಲ್ಟೇಜ್ ಮ್ಯಾಚ್! ಮತ್ತೊಂದು ಜಯದ ನೀರಿಕ್ಷೆಯಲ್ಲಿ ಆರ್ಸಿಬಿ.. ಗೆಲುವಿನ ಹುಡುಕಾಟದಲ್ಲಿ ಸಿಎಸ್ಕೆ



















